ಗಣೇಶೋತ್ಸವದಂದು ವರ್ಣರಂಜಿತವಾಗಿ ಕಂಗೊಳಿಸುತ್ತಿರುವ ಜಯನಗರ
ಹೊಸನಗರ ; ಹಿಂದೂಗಳ ಮಹಾಹಬ್ಬ ಶ್ರೀ ಗಣೇಶೋತ್ಸವವನ್ನು ದೇಶಾದ್ಯಂತ ಅಲ್ಲದೆ ಹೊರದೇಶಗಳಲ್ಲೂ ಆಚರಿಸುತ್ತಿದ್ದು ಹೊಸನಗರ ಅಲ್ಲದೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಜಯನಗರದಲ್ಲೂ ಸಡಗರ ಸಂಭ್ರಮ ಹಾಗೂ ವರ್ಣ ರಂಜಿತವಾಗಿ ಆಚರಿಸುತ್ತಿದ್ದಾರೆ.

ಜಯನಗರದ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿಯವರು ಹಾಗೂ ವರಸಿದ್ಧಿ ವಿನಾಯಕ ಯುವಕ ಸಂಘದವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕ ಶ್ರೀ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು ಭಕ್ತ ವೃಂದದವರನ್ನು ಹಾಗೂ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.
ಸೆಪ್ಟೆಂಬರ್ 23 ರಂದು ಮಧ್ಯಾಹ್ನ 2 ಗಂಟೆಗೆ ವಿವಿಧ ವೇಶಭೂಷಣಗಳೊಂದಿಗೆ ಡೊಳ್ಳು ಕುಣಿತ, ಚಂಡೆ, ಹುಲಿ ವೇಷ, ಗೊಂಬೆ ಕುಣಿತಗಳೊಂದಿಗೆ ರಾಜಬೀದಿ ಉತ್ಸವ ದೊಂದಿಗೆ ಶ್ರೀ ಗಣೇಶ ಮೂರ್ತಿಯನ್ನು ಶರಾವತಿ ನದಿಯಲ್ಲಿ ವಿಸರ್ಜಿಸಲಾಗುವುದು.
ಶ್ರೀ ಗಣೇಶೋತ್ಸವ ಸಂಬಂಧ ಪ್ರತಿದಿನ ರಸ ಮಂಜರಿ ಹಾಗೂ ಮನೋರಂಜನ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದಾಗಿ ಕಾರ್ಯಕ್ರಮದ ಆಯೋಜಕರು ತಿಳಿಸಿರುತ್ತಾರೆ.