‘ಗುರು ಸೇವಾರತ್ನ ಪ್ರಶಸ್ತಿ’ ಪುರಸ್ಕಾರ ಪತ್ರ ವಿತರಣಾ ಕಾರ್ಯಕ್ರಮ

0 0

ಹೊಸನಗರ : ಇಲ್ಲಿನ ಮಾವಿನಕೊಪ್ಪದ ಸ.ಹಿ.ಪ್ರಾ. ಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು (ರಿ) ಮೈಸೂರು ವತಿಯಿಂದ ಕೊಡ ಮಾಡಲ್ಪಟ್ಟ ಗುರು ಸೇವಾರತ್ನ ಪ್ರಶಸ್ತಿ ಪುರಸ್ಕಾರ ಪತ್ರ ವಿತರಣಾ ಕಾರ್ಯಕ್ರಮ ನೆರವೇರಿತು.

ತಾಲೂಕಿನ ಕ್ರಿಯಾಶೀಲ ಸಿ.ಆರ್.ಪಿ, ಬಿ.ಆರ್.ಪಿ ಗಳಾದ ವೆಂಕಟೇಶ್ ಹೆಚ್. ಸಿ.ಆರ್.ಪಿ, ರವಿ ಸಿ.ಆರ್.ಪಿ, ಮಂಜಪ್ಪ ಸಿ.ಆರ್.ಪಿ, ರಾಮದಾಸ್ ನಾಯ್ಕ್ ಸಿ.ಆರ್.ಪಿ, ರುಹಿನ್ ತಾಜ್ ಸಿ.ಆರ್.ಪಿ, ಸಿದ್ದಪ್ಪ BIERT, ಚಂದ್ರಕಾಂತ್ BIERT, ಹರೀಶ್ ಉಪಾಧ್ಯಾಯ ಬಿ.ಆರ್.ಪಿ ಇವರಿಗೆ 2022-23ನೇ ಸಾಲಿನ ಗುರು ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಈ ಕಾರ್ಯಕ್ರಮದಲ್ಲಿ ಬಿಇಒ ಕೃಷ್ಣಮೂರ್ತಿ ಹೆಚ್ ಆರ್, ಸಮನ್ವಯ ಅಧಿಕಾರಿ ರಂಗನಾಥ್ ಎಂ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಂಘದ ಅಧ್ಯಕ್ಷ ಸುರೇಶ್ ಹೆಚ್.ಆರ್, ಪ್ರಾಥಮಿಕ ಶಾಲಾ ಬಡ್ತಿ ಮುಖ್ಯೋಪಾಧ್ಯಾಯರ ಶಿಕ್ಷಕರ ಸಂಘದ ಅಧ್ಯಕ್ಷ ಕುಬೇರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಗಂಗಾಧರಯ್ಯ ಹೆಚ್.ಆರ್, ಶಿವಪ್ಪ, ಗಣೇಶ್, ನಾಗರಾಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಲಿಲ್ಲಿ ಡಿಸೋಜಾ, ಸಾವಿತ್ರಿಬಾಯಿ, ಶಿಕ್ಷಕಿಯರ ಸಂಘದ ಅಧ್ಯಕ್ಷೆ ಲೀಲಾವತಿ ಉಪಸ್ಥಿತರಿದ್ದರು.

ದೀಪ ಸಿ.ಆರ್.ಪಿ ನಿರೂಪಿಸಿದರು. ಸುರೇಶ್ ಸಾ ಕೆ ಬಿ.ಆರ್.ಪಿ ಸ್ವಾಗತಿಸಿದರು. ನಾಗರಾಜ್ ಸಿ.ಆರ್.ಪಿ ವಂದಿಸಿದರು‌.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು (ರಿ) ಮೈಸೂರು ಇವರ ಉಪಕಾರ ಸ್ಮರಣೆ ಮಾಡಲಾಯಿತು.

Leave A Reply

Your email address will not be published.

error: Content is protected !!