ಜನರ ಮಧ್ಯೆ ಸೇವೆ ಸಲ್ಲಿಸುತ್ತಿರುವ ಬೇಳೂರು ಗೋಪಾಲಕೃಷ್ಣರವರನ್ನು ಕಂಡರೆ ಹಾಲಿ ಶಾಸಕರಿಗೆ ಏಕೆ ಹೊಟ್ಟೆ ಉರಿ? ಸಣ್ಣಕ್ಕಿ ಮಂಜು

0 0


ಹೊಸನಗರ: ಹೊಸನಗರ-ಸಾಗರ ಕ್ಷೇತ್ರದ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಅಧಿಕಾರ ಇರಲಿ ಇಲ್ಲದಿರಲಿ ಸಾರ್ವಜನಿಕರ ಕಷ್ಟ-ಸುಖಗಳಿಗೆ ಬಾಗಿಯಾಗುತ್ತಾರೆ ಆದರೆ ನಮ್ಮ ಸಾಗರ-ಹೊಸನಗರ ಕ್ಷೇತ್ರದ ಹಾಲಿ ಶಾಸಕರಿಗೆ ಬೇಳೂರು ಅವರನ್ನು ಕಂಡರೆ ಹೊಟ್ಟೆ ಉರಿ ಏಕೆ? ಎಂದು ಬೇಳೂರು ಅಭಿಮಾನಿ ಸಂಚಾಲಕ ಸಣ್ಣಕ್ಕಿ ಮಂಜುರವರು ಪ್ರಶ್ನಿಸಿದರು.


ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ನಮ್ಮ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು 10ವರ್ಷದ ಅಧಿಕಾರದಲ್ಲಿಲ್ಲ ಆದರೂ ತಾಲ್ಲೂಕಿನಲ್ಲಿ ನಡೆಯುವ ಎಲ್ಲ ಕ್ರೀಡೆಗಳಿಗೂ ಬಡವರಿಗೂ ಮನೆ ಕಳೆದುಕೊಂಡವರಿಗೂ ಗದ್ದೆ ತೋಟ ಕಳೆದುಕೊಂಡವರಿಗೂ ತಮ್ಮ ಸ್ವಂತ ದುಡಿಮೆಯ ಹಣ ನೀಡುತ್ತಾ ಬರುತ್ತಿದ್ದಾರೆ ಇವರಿಗೆ ಮಕ್ಕಳಿಂದ ಹಿಡಿದು 80 ವರ್ಷದ ವೃದ್ಧರನ್ನು ಮಾತನಾಡಿಸುತ್ತಾರೆ ಪ್ರೀತಿ ತೋರಿಸುತ್ತಾರೆ ಇವರಿಗೆ ಬಡವ ಶ್ರೀಮಂತ ಎಂಬ ಭೇದವಿಲ್ಲ. ಜಾತಿಯತೆಯಂತೂ ಇಲ್ಲವೇ ಇಲ್ಲ ಇಂಥಹ ಜನ ನಾಯಕರನ್ನು ಜನರು ಇಷ್ಟಪಟ್ಟು ಸಮೀಪಕ್ಕೆ ಕರೆಯುವುದು ಸಹಜ. ಆದರೇ ಸಾಗರ-ಹೊಸನಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪನವರು ಗ್ರಾಮ-ಗ್ರಾಮಗಳಲ್ಲಿ ಭಾಷಣ ಮಾಡುವಾಗ ರಸ್ತೆ ಉದ್ಘಾಟನೆ ಮಾಡುವಾಗ ಹಬ್ಬ ಹರಿದಿನಗಳನ್ನು ಆಚರಿಸುವಾಗ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇವರನ್ನು ಟೀಕಿಸದ್ದಿದ್ದರೇ ರಾತ್ರಿ ನಿದ್ದೆಯೇ ಬರುವುದಿಲ್ಲ ಎಂಬ ರೀತಿ ವರ್ತಿಸುತ್ತಿದ್ದಾರೆ.

ಹಾಲಿ ಶಾಸಕರು ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಲಿ ಅದನ್ನು ಬಿಟ್ಟು ಕನ್ನಡಕ, ಬಟ್ಟೆಗಳ ಬಗ್ಗೆ ಮಾತನಾಡುವುದು ವೈಯಕ್ತಿಕ ವಿಚಾರಗಳನ್ನು ಟೀಕಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಿದ್ದೂ ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಸಾಗರ-ಹೊಸನಗರದ ಕ್ಷೇತ್ರದ ಮತದಾರರು ಇವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.

Leave A Reply

Your email address will not be published.

error: Content is protected !!