ಜನಸಂಖ್ಯಾ ಸ್ಫೋಟ ಆತಂಕಕಾರಿ ಸಮಸ್ಯೆಯಾಗಿದೆ ; ಡಾ.ಸುರೇಶ್ ಅಭಿಮತ
ಹೊಸನಗರ : ದೇಶವು ಈಗ ಫಲವತ್ತತೆಯ ದರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದ್ದರು ಜನಸಂಖ್ಯಾ ಸ್ಫೋಟದಿಂದ ಆತಂಕ ಎದುರಿಸಬೇಕಾದ ಬಂದಿರುವುದು ತೀರಾ ಶೋಚನೀಯವಾಗಿದೆ ಎಂದು ಹೊಸನಗರ ತಾಲೂಕು ಆರೋಗ್ಯಾಧಿಕಾರಿ ಡಾ. ಸುರೇಶ್ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ವಿಶ್ವ ಜನ ಸಂಖ್ಯಾ ದಿನಾಚರಣೆಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಸೇವೆಗಳ ಅಲ ಭ್ಯತೆಯಿಂದಾಗಿ ಅನಗತ್ಯ ಗರ್ಭಧಾರಣೆಯ ಹೆಚ್ಚಳವು ಆರೋಗ್ಯದ ವೆಚ್ಚಗಳ ಮೇಲೆ ಗಮನಹರ ಪರಿಣಾಮ ಬೀರಲಿದೆ. ವಿಶ್ವದ ಜನಸಂಖ್ಯೆಯ ಶೇ. 17.7 ಭಾರತದಾಗಿದ್ದು ರಾಜ್ಯ 7 ಕೋಟಿ, ದೇಶ 141 ಕೋಟಿ, ವಿಶ್ವ 804 ಕೋಟಿ ಜನಸಂಖ್ಯೆ ಹೊಂದಿ ದೇಶ ಸೀಮಿತ ಸಂಪನ್ಮೂಲಗಳ ಹಿನ್ನೆಲೆಯಲ್ಲಿ ಜನಸಂಖ್ಯಾ ಸ್ಫೋಟ ಸಮಸ್ಯೆಯಾಗಿದೆ ಎಂದರು.

ಜನಸಂಖ್ಯಾ ಬೆಳವಣಿಗೆ ದರ ಕಡಿಮೆ ಮಾಡಲು ಜನನ ನಿಯಂತ್ರಣ ಅಗತ್ಯವಾಗಿದೆ. ಜನಸಂಖ್ಯಾ ಸ್ಫೋಟ ವೃದ್ಧಿಗೊಂಡರೆ ಆಹಾರ ವಸತಿ ಶಿಕ್ಷಣ ಸಮಸ್ಯೆಗಳು ತೀವ್ರವಾಗಿ ಕಾಡಲಿದೆ ಎಂದರು. ಈ ನಿಟ್ಟಿನಲ್ಲಿ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಸಂತೋಷ ಮತ್ತು ಸಮೃದ್ಧಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಪ್ರತಿಜ್ಞೆ ಸ್ವೀಕರಿಸಬೇಕೆಂದರು.
ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸ್ವಾಮಿರಾವ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ತಹಶೀಲ್ದಾರ್ ಡಿ.ಜಿ. ಕೋರಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ.ಪಿ ಸುರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಿಜಯ, ಆಶಾ ಕಾರ್ಯಕರ್ತೆಯರ ಸಂಘದ ಸವಿತಾ ಉಪನ್ಯಾಸಕ, ದಾಮೋದರ ಶೆಣೈ, ಹಿರಿಯ ಆರೋಗ್ಯ ನಿರೀಕ್ಷಕ ರಮೇಶ್ ಆಚಾರ್, ಅಶೋಕ್, ಗೌತಮ್, ಪಟ್ಟಣ ಪಂಚಾಯಿತಿಯ ಲಕ್ಷ್ಮಣ್ ಮೊದಲಾದವರ ವೇದಿಕೆಯನ್ನು ಪ್ರತಿನಿಧಿಸಿದ್ದರು.
ಕ್ಷೇತ್ರ ಆರೋಗ್ಯ ಶಿಕ್ಷಕಿ ಕರಿಬಸಮ್ಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಮೇಶ ಆಚಾರ್ ವಂದಿಸಿದರು.