ಜನ ಬಲವೋ ಹಣ ಬಲವೋ ಎಂಬುದು ಫಲಿತಾಂಶದಲ್ಲಿ ಗೊತ್ತಾಗಲಿದೆ ; ರಂಜಿತಾರಾಧ ಗೋಪಾಲಕೃಷ್ಣ

0 0


ಹೊಸನಗರ: ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಜನಬಲ ಹಾಗೂ ಹಣ ಬಲದ ಮೇಲೆ ನಡೆಯಲಿದ್ದು ಜನ ಬೆಂಬಲವಿರುವ ಬೇಳೂರು ಗೋಪಾಲಕೃಷ್ಣರವರು ಜಯಗೊಳಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಪತ್ನಿ ರಂಜಿತಾರಾಧ ಬೇಳೂರು ಗೋಪಾಲಕೃಷ್ಣರವರು ಹೇಳಿದರು.

ಪಟ್ಟಣದ ಗೇರುಬೀಜ ಫ್ಯಾಕ್ಟರಿಗೆ ಭೇಟಿ ನೀಡಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ನೌಕರ ವರ್ಗದವರಿಂದ ಮತಯಾಚಿಸಿ ಸುದ್ಧಿಗಾರರೊಂದಿಗೆ ಮಾತನಾಡಿ, ಹೊಸನಗರ-ಸಾಗರ ಕ್ಷೇತ್ರದಲ್ಲಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಹರಿದು ಬರುತ್ತಿದೆ. ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ ಉಳಿದಿರುವುದು ದೇವರಿಗೆ ಬಿಟ್ಟಿದ್ದು ನಾವು ಹಣ ಬಲದಿಂದ ಚುನಾವಣೆ ಎದುರಿಸುತ್ತಿಲ್ಲ ನಮ್ಮ ಪತಿಯವರು 10 ವರ್ಷಗಳಿಂದ ಜನ ಸೇವೆ ಮಾಡಿದ್ದಾರೆ ಜನಗಳಿಗೆ ಸಮೀಪವಿದ್ದಾರೆ ಸುಖ-ದುಃಖಗಳಲ್ಲಿ ಜನರೊಂದಿಗೆ ಬೆರೆತ್ತಿದ್ದಾರೆ ಇದಕ್ಕಾಗಿಯೇ ಜನಸಾಗರವೇ ಹರಿದು ಬರುತ್ತಿದ್ದೆ ಕೇವಲ ರಸ್ತೆ ಮಾಡಿಕೊಂಡು ಅಭಿವೃದ್ಧಿ ಮಾಡಿದ್ದೇವೆ ಎಂದರೇ ಸಾಲದು ಜನರಿಗಾಗಿ ಜನ ಸೇವಕರಾಗಿ ಜನರೊಂದಿಗೆ ಇದ್ದರೇ ಮಾತ್ರ ಜನ ಸೇವಕ ನೆನಸಿಕೊಳ್ಳುತ್ತಾರೆ ಕೇವಲ ರಸ್ತೆ-ರಸ್ತೆ ಎಂದರೆ ಅದೇ ಅಭಿವೃದ್ಧಿ ಮಾಡಿದ್ದೇವೆ ಈ ಕಾಲದಲ್ಲಿ ಯಾರು ನಂಬುವುದಿಲ್ಲ ಅಭಿವೃದ್ಧಿ ಮಂತ್ರವೂ ಲೆಕ್ಕಕ್ಕೆ ಬರುವುದಿಲ್ಲ ಎಂದರು ಮೇ 13ರಂದು ಜನಸೇವಕನಿಗೆ ಜಯವೋ ಅಥವಾ ಹಣವಂತರಿಗೆ ಜಯವೋ ತಿಳಿಯಲಿದೆ ಎಂದರು.


ಈ ಮತಯಾಚನೆಯ ಸಮಯದಲ್ಲಿ ಪಟ್ಟಣ ಪಂಚಾಯತಿ ಸದಸ್ಯೆ ಸಿಂಥಿಯಾ ಶರಾವೋ, ಶಾಹೀನ, ಅಶ್ವಿನಿಕುಮಾರ್, ಚಂದ್ರಕಲಾ ನಾಗರಾಜ್, ತಾಲ್ಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಬೇಳೂರು ಅಭಿಮಾನಿ ಬಳಗದ ಸಣ್ಣಕ್ಕಿ ಮಂಜು, ಜಯನಗರ ಗೋಪಿ, ಗಗ್ಗ ಬಸವರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!