ಜು. 22 ರಂದು ಕಾರಣಗಿರಿಯಲ್ಲಿ ‘ಬಿದನೂರು ಇತಿಹಾಸ-ಒಂದು ನೆನಪು’ ಕಾರ್ಯಕ್ರಮ

0 19


ಹೊಸನಗರ : ಕಾರಣಗಿರಿ ಗ್ರಾಮಭಾರತಿ ಟ್ರಸ್ಟ್ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ಜುಲೈ 22 ರ ಶನಿವಾರ ‘ಬಿದನೂರು ಇತಿಹಾಸ- ಒಂದು ನೆನಪು’ ಕಾರ್ಯಕ್ರಮ ಎಂದು ನಡೆಯಲಿದೆ. ಗ್ರಾಮಭಾರತಿ ಕಾರ್ಯದರ್ಶಿ ಹನಿಯ ರವಿ ಹೇಳಿದ್ದಾರೆ.


ಮಧ್ಯಾಹ್ನ 2 ಗಂಟೆಯಿಂದ ಫ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಕನ್ನಡ ನಾಡಿನ ಇತಿಹಾಸದಲ್ಲಿ ಬಿದನೂರು ಸಾಮ್ರಾಜ್ಯದ ಕೊಡುಗೆ’ ಎಂಬ ವಿಚಾರವಾಗಿ ತಾಲ್ಲೂಕು ಮಟ್ಟದ ಭಾಷಣ ಸ್ಪರ್ಧೆ ನಡೆಯಲಿದೆ.


ಮಧ್ಯಾಹ್ನ 3 ಗಂಟೆಯಿಂದ ನಡೆಯುವ ವಿಚಾರ ಸಂಕಿರಣದಲ್ಲಿ ಡಾ|| ಕೆಳದಿ ವೆಂಕಟೇಶ ಜೋಯ್ಸ್ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಉಪನ್ಯಾಸಕ ಡಾ|| ಕೆ. ಜಿ. ವೆಂಕಟೇಶ, ಸುಧೀಂದ್ರ ಭಂಡಾರ್ಕರ್, ಸುಪ್ರಕಾಶ್, ಅಜಯಕುಮಾರ್ ಶರ್ಮಾ ವಿಷಯ ಮಂಡಿಸಲಿದ್ದಾರೆ.


ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಆನಂದಪುರ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.


ಗ್ರಾಮಭಾರತಿ ಅಧ್ಯಕ್ಷ ಎನ್. ಡಿ. ನಾಗೇಂದ್ರರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಇತಿಹಾಸ ಸಂಶೋಧಕ ಅಂಬ್ರಯಮಠ, ಸಮಾರೋಪ ಭಾಷಣ ಮಾಡಲಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ, ಇತಿಹಾಸ ಸಂಶೋಧಕ ಕೆಳದಿ ಗುಂಡಾಜೋಯ್ಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಲಯ ಜಂಟಿ ನಿರ್ದೇಶಕ ಅಶೋಕ ಎನ್ ಛಲವಾದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಪಾಲ್ಗೊಳ್ಳಲಿದ್ದಾರೆ.

ಅಂಬ್ರಯಮಠ ಬರೆದು ಸದಭಿರುಚಿ ಪ್ರಕಾಶನ ಪ್ರಕಟಿಸಿರುವ ಬಿದನೂರು ನಗರದ ಸಂಕ್ಷಿಪ್ತ ಇತಿಹಾಸ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಗ್ರಾಮಭಾರತಿ ಕಾರ್ಯದರ್ಶಿ ಹನಿಯ ರವಿ ಮನವಿ ಮಾಡಿದ್ದಾರೆ

Leave A Reply

Your email address will not be published.

error: Content is protected !!