ತುಂಡಾಗಿ ಬಿದ್ದ ವಿದ್ಯುತ್ ತಂತಿ ; ಪತ್ರಿಕಾ ವಿತರಕ ಕೂದಲೆಳೆ ಅಂತರದಲ್ಲಿ ಪಾರು

0 30


ಹೊಸನಗರ: ಸೋಮವಾರ ಬೆಳಿಗ್ಗೆ ಬೈಕಿನಲ್ಲಿ ಪತ್ರಿಕೆ ವಿತರಿಸುವ ಸಂದರ್ಭದಲ್ಲಿ ರಾಮಕೃಷ್ಣ ವಿದ್ಯಾಲಯದ ಹಿಂಭಾಗ ಭಾನುವಾರ ರಾತ್ರಿಯ ಗಾಳಿ ಮಳೆಗೆ ವಿದ್ಯುತ್ ಮೈನ್ ಲೈನ್ ತಂತಿ ನೆಲಕ್ಕೆ ಬಿದ್ದಿದ್ದು ಅದನ್ನು ಹತ್ತಿರದಿಂದ ಗಮನಿಸಿದ ಪತ್ರಿಕಾ ವಿತರಕ ವಿಜೇಂದ್ರ ಪ್ರಭುರವರು ಸೂಕ್ಷ್ಮತೆಯಿಂದ ಗಮನಿಸಿ ಬೈಕ್ ನಿಲ್ಲಿಸಿದ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾದ ನಡೆದಿದೆ.


ಎಂದಿನಂತೆ ಬೆಳಿಗ್ಗೆ 6ಗಂಟೆಗೆ ಪ್ರತಿ ಮನೆಗಳಿಗೆ ದಿನ ಪತ್ರಿಕೆಯನ್ನು ವಿತರಿಸುತ್ತಾ ಐ.ಬಿ ರಸ್ತೆಯಲ್ಲಿರುವ ರಾಮಕೃಷ್ಣ ವಿದ್ಯಾಲಯದ ಹಿಂಭಾಗದಲ್ಲಿ ಪತ್ರಿಕೆ ವಿತರಿಸುವ ಸಲುವಾಗಿ ಹೋಗಿದ್ದಾರೆ. ಭಾರೀ ಪ್ರಮಾಣದಲ್ಲಿ ಹೊಸನಗರದಲ್ಲಿ ಮಳೆ ಬೀಳುತ್ತಿದ್ದರಿಂದ ನಿಧಾನವಾಗಿ ಬೈಕ್ ಚಲಾಯಿಸುತ್ತಿದ್ದಾಗ ಸಮೀಪ ಮೈನ್ ಲೈನ್ ವಿದ್ಯುತ್ ಲೈನ್ ತಂತಿ ಕೆಳಗೆ ಬಿದ್ದಿದ್ದು ವಿತರಕ ತಕ್ಷಣ ಬೈಕ್ ನಿಲ್ಲಿಸದ್ದಿದ್ದರೇ ವಿದ್ಯುತ್ ತಂತಿಗೆ ಬೈಕ್ ತಗುಲಿದ್ದರೇ ಅಲ್ಲೇ ದುರ್ಘಟನೆ ನಡೆಯುತ್ತಿತ್ತು ವಿತರಕನ ಸಮಯ ಪ್ರಜ್ಞೆಯಿಂದ ಸಾವಿನ ಅಂಚಿನಿಂದ ಪಾರಾಗಿದ್ದು ತಕ್ಷಣ ಮೆಸ್ಕಾಂ ಇಲಾಖೆಯವರ ಗಮನಕ್ಕೆ ತಂದು ವಿದ್ಯುತ್ ನಿಲುಗಡೆಗೊಳಿಸಿದ್ದಾರೆ.


ಸ್ಪಂದಿಸಿದ ಮೆಸ್ಕಾಂ ಇಲಾಖೆ:

ಪತ್ರಿಕಾ ವಿತರಕ ವಿಜೇಂದ್ರ ಪ್ರಭುರವರು ತಂತಿ ಕಟ್ ಆಗಿರುವುದನ್ನು ಮೆಸ್ಕಾಂ ಇಲಾಖೆಯ ಜೆ.ಇ.ಇ ಚಂದ್ರಶೇಖರ್‌ರವರ ಗಮನಕ್ಕೆ ತಂದಿದ್ದರಿಂದ ಈ ರಸ್ತೆಯಲ್ಲಿ ಓಡಾಟ ನಡೆಸುವ ಸಾರ್ವಜನಿಕರುಗಳ ಹಾಗೂ ಪ್ರಾಣಿ ಪಕ್ಷಿಗಳು ಜೀವ ಉಳಿಸಿದ್ದಾಂತಾಗಿದೆ.

Leave A Reply

Your email address will not be published.

error: Content is protected !!