ನವೋದಯ ಶಾಲೆಗೆ ಆಯ್ಕೆ ; ಅಭಿನಂದನೆ
ಹೊಸನಗರ : ಇಲ್ಲಿನ ಶಾಸಕರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ನವೋದಯ ಪರೀಕ್ಷಾ ತರಬೇತಿಯಲ್ಲಿ ತರಬೇತಿ ಪಡೆದ ಕು|| ವಿಖ್ಯಾತ್ ಬಿ.ಕೆ ನವೋದಯ ಶಾಲೆಗೆ ಆಯ್ಕೆಯಾಗಿರುತ್ತಾನೆ.
ಇವನು ಬಿಳ್ಳೋಡಿಯ ಹೆಚ್‌ಪಿಎಸ್ ಶಾಲೆಯಲ್ಲಿ ಓದುತ್ತಿದ್ದು, ಶಿಬಿರದಲ್ಲಿ ಭಾಗವಹಿಸಿ ಯಶಸ್ವಿಯಾಗಿರುತ್ತಾನೆ. ಅವನಿಗೆ ಶಾಸಕರ ಮಾದರಿ ಶಾಲೆಯ ಅಧ್ಯಕ್ಷ ಮತ್ತು ಸದಸ್ಯರ ಪರವಾಗಿ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿಯ ಪೋಷಕರು ಕೂಡಾ ಶಾಸಕರ ಮಾದರಿ ಶಾಲೆಯನ್ನ ಅಭಿನಂದಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಯ ತರಬೇತುದಾರರಾದ ಹರೀಶ್, ನಾಗರಾಜ್, ರಮ್ಯಾ, ಅರ್ಚನಾ ನಾಗರಾಜ್, ತಾರಾ ಪಟಗಾರ್ ರವರನ್ನ ಅಭಿನಂದಿಸಿದ್ದಾರೆ.