ನಾಳೆ ಹೊಸನಗರ ತಾಲೂಕು ಮಟ್ಟದ ದಸರಾ ಆಯ್ಕೆ ಕ್ರೀಡಾಕೂಟ

0 45

ಹೊಸನಗರ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹೊಸನಗರ ತಾಲ್ಲೂಕು ಮಟ್ಟದ ದಸರಾ ಆಯ್ಕೆ ಕ್ರೀಡಾಕೂಟ ಸೆ. 07 ರಂದು ಬೆಳಿಗ್ಗೆ 9:00 ಗಂಟೆಯಿಂದ ಹೊಸನಗರ ಪಟ್ಟಣದ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಾಲಚಂದ್ರ ರಾವ್ ತಿಳಿಸಿದ್ದಾರೆ.


ಈ ಕ್ರೀಡಾಕೂಟದಲ್ಲಿ ಅಥ್ಲೆಟಿಕ್, ಖೋ-ಖೋ, ಕಬಡ್ಡಿ, ವಾಲಿಬಾಲ್ ಥ್ರೋ ಬಾಲ್, ಸ್ಪರ್ಧೆಗಳು ನಡೆಯಲಿದೆ.
ಹೊಸನಗರ ತಾಲೂಕಿನವರಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಜೊತೆಯಲ್ಲಿ ಅಧಾರ್ ಕಾರ್ಡ್ ತರಬೇಕು. ಸ್ಪರ್ಧೆಯಲ್ಲಿ ಎರಡು ವೈಯುಕ್ತ ಒಂದು ಗುಂಪು ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶವಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!