ಬೇಳೂರು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ, ರೋಗಿಗಳಿಗೆ ಹಾಲು, ಹಣ್ಣು-ಹಂಪಲು ವಿತರಣೆ

0 256

ರಿಪ್ಪನ್‌ಪೇಟೆ: ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರುರವರ ಹುಟ್ಟುಹಬ್ಬವನ್ನು ಅಭಿಮಾನಿ ಬಳಗದವರು ಇಂದು ರಿಪ್ಪನ್‌ಪೇಟೆ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಅರ್ಚನೆಯೊಂದಿಗೆ ಪೂಜೆ ಸಲ್ಲಿಸಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್‌ ಅನ್ನು ವಿತರಿಸಿ ಸಂಭ್ರಮದೊಂದಿಗೆ ಆಚರಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಪದವಿ ಕಾಲೇಜ್ ಸಿಡಿಸಿ ಉಪಾಧ್ಯಕ್ಷ ಹಾಲಸ್ವಾಮಿಗೌಡ ಬೆಳಕೋಡು, ಗ್ರಾಮ ಪಂಚಾಯ್ತಿ ಸದಸ್ಯರಾದ ಎನ್.ಚಂದ್ರೇಶ್, ಡಿ.ಈ.ಮಧುಸೂದನ್, ರವೀಂದ್ರ ಕೆರೆಹಳ್ಳಿ, ಎನ್.ರಮೇಶ್, ನರಸಿಂಹ, ಬಿ.ಎಸ್.ಎನ್.ಎಲ್. ಶ್ರೀಧರ, ಗಣೇರ್ ರಾವ್, ಬೈರಪ್ಪ, ಹರ್ಷ, ಹೇಮಾ, ಇನ್ನು ಮುಂತಾದ ಮುಖಂಡರು ಪಾಲ್ಗೊಂಡಿದ್ದರು.

ಮಳವಳ್ಳಿ ಶ್ರೀಮಹಾಲಿಂಗೇಶ್ವರ ಶ್ರೀಬಸವಣ್ಣ ದೇವರ ಪುನರ್ ಪ್ರತಿಷ್ಟಾಪನೆ ಮತ್ತು ನೂತನ ದೇವಾಲಯ ಲೋಕಾರ್ಪಣೆ

ರಿಪ್ಪನ್‌ಪೇಟೆ: ಸಮೀಪದ ಮಳವಳ್ಳಿ ಗ್ರಾಮದಲ್ಲಿ ಫೆಬ್ರವರಿ 24 ರಂದು ಶನಿವಾರ ಬೆಳಗ್ಗೆ 4:30 ಶ್ರೀಮಹಾಲಿಂಗೇಶ್ವರ ಶ್ರೀಬಸವಣ್ಣ ದೇವರುಗಳ ಪುನರ್‌ಪ್ರತಿಷ್ಠಾಪನಾ ಸಮಾರಂಭ ಮತ್ತು ನೂತನ ದೇವಾಲಯದ ಲೋಕಾರ್ಪಣೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವು ಮಳಲಿಮಠದ ಡಾ.ಗುರುನಾಗಭೂಷಣ ಮಹಾಸ್ವಾಮಿಜಿಯವರ ದಿವ್ಯಸಾನಿಧ್ಯದಲ್ಲಿ ಆಯೋಜಿಸಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿ 24 ರಂದು ಬೆಳಗ್ಗೆ 4:30ಕ್ಕೆ ಮಳಲಿಮಠದ ಡಾ.ಗುರುನಾಗಭೂಷಣ ಮಹಾಸ್ವಾಮಿಜಿಯವರ ದಿವ್ಯಸಾನಿಧ್ಯದಲ್ಲಿ ಗಣಪತಿ ಪುಣ್ಯಾಹ, ನಾಂದಿಪಂಚ ಕಳಸ, ವಾಸ್ತು ಹೋಮ ಇತ್ಯಾದಿ ಧಾರ್ಮಿಕ ಪೂಜೆ ನಂತರ ನೂತನ ಕಟ್ಟಡ ಪ್ರವೇಶ ದೇವರುಗಳ ಪ್ರತಿಷ್ಟಾಪನೆ ಹಾಗೂ ಕಲಶಾಭಿಷೇಕ, ಕುಂಭಾಭಿಷೇಕ ರುದ್ರಾಭಿಷೇಕ ಮಹಾಮಂಗಳಾರತಿ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ. ನಂತರ 10-30ಕ್ಕೆ ಮಳಲಿಮಠದ ಡಾ.ಗುರುನಾಗಭೂಷಣ ಮಹಾಸ್ವಾಮಿಜಿ ಮತ್ತು ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆಮಠದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಹಾಗೂ ಬ್ರಹ್ಮಶ್ರೀ ನಾರಾಯಣಗುರು ಮಹಾಸಂಸ್ಥಾನ ಮಠ ನಿಟ್ಟೂರು ಶ್ರೀರೇಣುಕಾನಮದ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಆಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ವಹಿಸುವರು.
ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಶ್ರೀಮಹಾಲಿಂಗೇಶ್ವರ ಶ್ರೀಬಸವಣ್ಣ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ನಾಗರಾಜಪ್ಪಗೌಡರು ಇನ್ನಿತರರು ಭಾಗವಹಿಸುವರು ಎಂದು ದೇವಸ್ಥಾನ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.

error: Content is protected !!