ಬೇಸಿಗೆ ಶಿಬಿರ ಪ್ರಾರಂಭ‌ | ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅನಾವರಣಗೊಳಿಸಲು ಬೇಸಿಗೆ ಶಿಬಿರ ಸಹಕಾರಿ ; ಹನಿಯಾ ರವಿ

0 0


ಹೊಸನಗರ: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಮಕ್ಕಳ ಬೇಸಿಗೆ ಶಿಬಿರ ಅನುಕೂಲಕರವಾಗಿರುತ್ತದೆ ಎಂದು ಪರಿಸರವಾದಿ ಹನಿಯಾ ರವಿಯವರು ಹೇಳಿದರು.

ಪಟ್ಟಣದ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ರಂಗ ಶಿಕ್ಷಣ ಪ್ರಧಾನವಾಗಿ ಕೇಂದ್ರಿಕೃತವಾದ ಬೇಸಿಗೆ ಶಿಬಿರ ಡ್ರಿಮ್ಸ್ ಆಫ್ ಡ್ರಾಮ ಏಪ್ರಿಲ್10 ರಿಂದ 26 ರವರೆಗೆ ಆರಂಭವಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭೆಗಳನ್ನು ಹೊರ ಹಾಕಬೇಕಾದರೆ ಅವರಿಗೆ ವೇದಿಕೆ ಅಗತ್ಯವಾಗಿಬೇಕು ಅದರ ಜೊತೆಗೆ ತನ್ನ ಮನಸ್ಸಿನಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಗುರುಗಳು ಇರಬೇಕು. ಗುರುವಿನ ಮೂಲಕ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದಾಗ ಗುರುಗಳ ಮೂಲಕ ಗುರುಗಳು ಅನಾವರಣಗೊಂಡ ತನ್ನ ಮನಸ್ಸಿನ ಭಾವನೆಗಳಿಗೆ ಸ್ಪಂದಿಸಿ ಮಕ್ಕಳ ಮನಸ್ಸಿನ ಮೇಲೆ ಧೈರ್ಯ ತುಂಬಿದಾಗ ಆ ಮಕ್ಕಳು ಧೈರ್ಯದಿಂದ ಪ್ರದರ್ಶನ ಮಾಡಲು ಸಾಧ್ಯ. ಇದಕ್ಕಾಗಿಯೇ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ ಇದರ ಉಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.


ಈ ಸಮಾರಂಭದಲ್ಲಿ ಗ್ರಾಮ ಭಾರತಿ ಟ್ರಸ್ಟ್‌ನ ಮುಖ್ಯಸ್ಥರಾದ ಹನಿಯಾ ರವಿ ಶಿಬಿರವನ್ನು ಉದ್ಘಾಟಿಸಿದರು. ಹೊಸನಗರ ತಾಲ್ಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾದ ಎಂ ಕೆ ವೆಂಕಟೇಶಮೂರ್ತಿ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಗ್ರಾಮಭಾರತಿ ಟ್ರಸ್ಟ್ ಕಾರಣಗಿರಿ ಇವರ ಸಹಯೋಗದೊಂದಿಗೆ ರಂಗಾಯಣ ಮೈಸೂರು ಇಲ್ಲಿ ತರಬೇತಿ ಹೊಂದಿದ ರಂಗಕರ್ಮಿ ನಟ ಶ್ರೀಧರ್ ಮತ್ತು ಇವರ ತಂಡದ ನೇತೃತ್ವದಲ್ಲಿ ಶಿಬಿರ ಆಯೋಜನೆಗೊಂಡಿದೆ. ನಾಟಕ ರಂಗಸಂಗೀತ ಮಣ್ಣಿನ ಮಾದರಿ ಕಲೆ, ಕೋಲಾಟ, ನೃತ್ಯ ಮಕ್ಕಳ ಚಿತ್ರಗಳ ಪ್ರದರ್ಶನ ಕರಕುಶಲ ವಸ್ತುಗಳ ತಯಾರಿಕೆ ಹೀಗೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಅಂಶಗಳ ಬಗ್ಗೆ ಶಿಬಿರದಲ್ಲಿ ಮಕ್ಕಳು ತರಬೇತಿಯನ್ನು ಹೇಳಿಕೊಡಲಾಗುತ್ತಿದೆ ಇದರ ಉಪಯೋಗವನ್ನು ಎಲ್ಲ ಮಕ್ಕಳು ಪಡೆದುಕೊಳ್ಳಬೇಕೆಂದರು.

Leave A Reply

Your email address will not be published.

error: Content is protected !!