ಮಕ್ಕಳ ದುಡಿಮೆ ನಿಲ್ಲಿಸಿ ಶಿಕ್ಷಣ ನೀಡಲು ಮನಃಪರಿವರ್ತನೆ ಮಾಡುವಂತೆ ನ್ಯಾಯಾಧೀಶ ರವಿಕುಮಾರ್ ಕರೆ

0 0

ಹೊಸನಗರ : ಮಕ್ಕಳ ದುಡಿಮೆ ನಿಲ್ಲಿಸಿ ಶಿಕ್ಷಣ ನೀಡಲು ಮನಃಪರಿವರ್ತನೆ ಮಾಡುವಂತೆ ನ್ಯಾಯಾಧೀಶ ರವಿಕುಮಾರ್ ಕರೆ ನೀಡಿದರು.

ಜಿಲ್ಲಾಡಳಿತ ಜಿಲ್ಲಾ ಕಾನೂನು ಸೇವಾ ಸಮಿತಿ ಜಿಲ್ಲಾ ಬಾಲಕಾರ್ಮಿಕ ಸೇವೆಗಳ ಸೊಸೈಟಿ ಸಮಿತಿ ಆಶ್ರಯದಲ್ಲಿ ಹೊಸನಗರ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೀಡುವ ಸ್ಥಬ್ಧ ಚಿತ್ರ ಜಾಗೃತಿ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳನ್ನು ಹೋಟೆಲ್ ಗ್ಯಾರೇಜು ಅಂಗಡಿಗಳಲ್ಲಿ ದುಡಿಮೆಗೆ ಬಳಸಿಕೊಳ್ಳುವ ಮೂಲಕ ಅವರ ಕಿಶೋರಾವಸ್ಥೆ ಹಾಗೂ ಬಾಲ್ಯಾವಸ್ಥೆಯನ್ನು ದೈಹಿಕವಾಗಿ ನೈತಿಕವಾಗಿ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಗೊತ್ತಿದ್ದು ಶೋಷಣೆಗೆ ಒಳಪಡಿಸಿ ಅವರ ಬಾಲ್ಯಾವಸ್ಥೆಯನ್ನು ಮೊಟಕುಗೊಳಿಸು ಸುತ್ತಿರುವುದು ಶಿಕ್ಷರ್ಹ ಅಪರಾಧವಾಗಿದೆ.

ಶಿಕ್ಷಣದಿಂದ ವಂಚಿತರಾಗಿ ದುಡಿಮೆಯಲ್ಲಿ ತೊಡಗಿರುವ ಮಕ್ಕಳನ್ನು ರಾಷ್ಟ್ರೀಯ ಮುಖ್ಯ ವಾಹಿನಿಗೆ ಕರೆ ತರಲು ಎಲ್ಲರೂ ಸಮವಹಿಸಬೇಕು. ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕು ಈ ಮಕ್ಕಳಿಗೆ ಈ ಹಕ್ಕನ್ನು ಕೊಡಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿವೇದಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಅಪರಾಧಕ್ಕೆ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವ ಮಾಲೀಕರಿಗೆ ಆರು ತಿಂಗಳಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 20 ಸಾವಿರದಿಂದ 50 ಸಾವಿರವರೆಗೆ ದಂಡ ಅಥವಾ ಎರಡನ್ನು ವಿಧಿಸಲು ಅವಕಾಶವಿರುತ್ತದೆ ಎಂದು ಸಾರ್ವಜನಿಕರಿಗೆ ಅವರು ಮನನ ಮಾಡಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ವ್ಯವಹಾರ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನಾಸಿರಾಬಾನು, ಕಾರ್ಮಿಕ ನಿರೀಕ್ಷಕ ಭೀಮೇಶ್ ಪಿ, ವಕೀಲ ಸಂಘದ ಅಧ್ಯಕ್ಷ ವಾಲೆಮನೆ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಕಟ್ಟಡ ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎನ್ ರವೀಂದ್ರ ಸಾಗರ್ ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಭೀಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಕೊನೆಯಲ್ಲಿ ವಂದಿಸಿದರು.

Leave A Reply

Your email address will not be published.

error: Content is protected !!