ಮನೆ ಹಾಗೂ ಕೊಟ್ಟಿಗೆಗೆ ತಗುಲಿದ ಬೆಂಕಿ ; ಒಂದು ಹಸು ಸಾವು ! ಲಕ್ಷಾಂತರ ರೂ. ನಷ್ಟು ನಷ್ಟ

0 0


ಹೊಸನಗರ: ತಾಲ್ಲೂಕಿನ ಕಸಬಾ ಹೋಬಳಿ ಕಳೂರು ಕಲ್ಲೋಡಿ ಗ್ರಾಮದ ಅಣ್ಣಪ್ಪ ಎಂಬುವವರ ವಾಸದ ಮನೆಗೆ ಹಾಗೂ ದನದ ಕೊಟ್ಟಿಗೆಗೆ ಭಾನುವಾರ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಒಂದು ಹಸು ಪ್ರಾಣ ಬಿಟ್ಟಿದ್ದು ಮನೆಯಲ್ಲಿದ್ದ ಅಕ್ಕಿ, ದವಸ ಧಾನ್ಯಗಳು ಸುಟ್ಟು ಕರಕಲಾಗಿದೆ ಸುಮಾರು ಅಂದಾಜು 1.50ಲಕ್ಷ ರೂ. ನಷ್ಟು ನಷ್ಟವಾದ ಘಟನೆ ನಡೆದಿದೆ.


ಹೊಸನಗರ ತಾಲ್ಲೂಕಿನಲ್ಲಿ ಒಂದು ತಿಂಗಳಿಂದೀಚೆಗೆ ಅನೇಕ ಅಗ್ನಿ ಅನಾಹುತ ಪ್ರಕರಣಗಳು ಸಂಭವಿಸುತ್ತಿದ್ದು ಬಾರಿ ಬಿಸಿಲು ಮತ್ತು ಗಾಳಿ ಇರುವುದೇ ಈ ಘಟನೆಗಳಿಗೆ ಕಾರಣವಾಗಿದೆ.


ಅಧಿಕಾರಿಗಳು ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ:

ಈ ಘಟನೆಯನ್ನು ತಿಳಿಯುತ್ತಿದಂತೆ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಸದಸ್ಯ ಚಿಕ್ಕನಕೊಪ್ಪ ಶ್ರೀಧರ್, ಗ್ರಾಮ ಪಂಚಾಯತಿ ಪಿಡಿಓ ಪಾರ್ವತಮ್ಮ, ಪೊಲೀಸ್ ಇಲಾಖೆಯ ಈರನಾಯ್ಕ್, ಗ್ರಾಮ ಆಡಳಿತಾಧಿಕಾರಿ ಕೌಶಿಕ್, ಪಶುವೈದ್ಯಾಧಿಕಾರಿಗಳು ಆಗಮಿಸಿ ಘಟನೆಯ ಬಗ್ಗೆ ವಿವರಣೆಯನ್ನು ತಿಳಿದುಕೊಂಡು ಸರ್ಕಾರಕ್ಕೆ ತಿಳಿಸುವುದಾಗಿ ಹಾಗೂ ಸರ್ಕಾರದಿಂದ ಪರಿಹಾರ ಸಿಗುವಂತೆ ಮಾಡುವುದಾಗಿ ತಿಳಿಸಿದರು.

Leave A Reply

Your email address will not be published.

error: Content is protected !!