ಮಹಿಳಾ ಮೀಸಲಾತಿ ಮಸೂದೆ ಸ್ವಾಗತಾರ್ಹ ; ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ

0 142ರಿಪ್ಪನ್‌ಪೇಟೆ: ಕೇಂಧ್ರ ಸರ್ಕಾರ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಒದಗಿಸುವ ವಿಧೇಯಕ್ಕೆ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಸ್ವಾಗತಿಸಿದರು.


ರಿಪ್ಪನ್‌ಪೇಟೆಯ ಕರ್ನಾಟಕ ಪ್ರಾಂತೀಯ ಹಿಂದು ಮಹಾಸಭಾ ಗಣಪತಿಗೆ ಪೂಜೆ ಸಲ್ಲಿಸಿ ನಂತರ ಗ್ರಾಮ ಪಂಚಾಯ್ತಿ ಕಛೇರಿಗೆ ಭೇಟಿ ನೀಡಿದ ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರಿಗೆ ಗ್ರಾಮಾಡಳಿತದವರ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದಿನ ಹಲವು ಸರ್ಕಾರಗಳು ದೃಢ ನಿಲುವು ತೆಗೆದುಕೊಂಡು ಮಹಿಳೆಯರಿಗೆ ಮೀಸಲಾತಿ ಘೋಷಿಸಬೇಕಾಗಿತ್ತು ಆದರೆ ಶಾಸನ ಸಭೆಯಲ್ಲಿ ಗಟ್ಟಿಯಾಗಿ ಓರ್ವ ಮಹಿಳೆಯು ಧ್ವನಿ ಎತ್ತದೇ ಇರುವುದರಿಂದಾಗಿ ಇಷ್ಟು ವರ್ಷ ಕಾಯಬೇಕಾಯಿತು ಎಂದು ಹೇಳಿ, ನಾನು 1973 ರಲ್ಲಿ ವಿಧಾನಸಭೆಗೆ ಪ್ರವೇಶಿದ ಸಂದರ್ಭದಲ್ಲಿ ಗೇಣಿ ರೈತರ ಪರವಾಗಿ ಸತತ ಮೂರು ಗಂಟೆಗಳ ಕಾಲ ಪ್ರಸ್ತಾಪಿಸುವುದರೊಂದಿಗೆ ಕಾಗೋಡು ಹೋರಾಟ ನಡೆಸಿದರ ಪ್ರತಿಫಲದಿಂದಾಗಿ ಅಂದಿನ ಸರ್ಕಾರದ ಮುಖ್ಯಮಂತ್ರಿಯವರು ಸಮಿತಿಯನ್ನು ನೇಮಿಸಿ ಗೇಣಿರೈತರಿಗೆ ಹಕ್ಕು ನೀಡಿದರಿಂದ ರೈತರು ಜೀವನ ಸುಗಮವಾಯಿತು ಎಂದರು.

ಅಲ್ಲದೆ ಸರ್ಕಾರ ಯಾವುದೇ ಇರಲಿ ಒಳ್ಳೆಯ ಕೆಲಸ ಮಾಡಿದಾಗ ಸ್ವಾಗತಿಸುವುದು ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಲೋಕಸಭೆಯಲ್ಲಿ ಮಂಡಿಸಲಾದ ಮಹಿಳೆಯರಿಗೆ ಶೇ‌. 33 ರಷ್ಟು ಮೀಸಲಾತಿ ನೀಡಿರುವುದು ಸಂತೋಷ ತಂದಿದೆ. ಅಲ್ಲದೆ ಸ್ಥಳೀಯ ಮಟ್ಟದಿಂದ ಲೋಕಸಭೆಯವರಿಗೂ ಪುರುಷರಂತೆ ಮಹಿಳೆಯರು ಕಾರ್ಯನಿರ್ವಹಿಸುವಂತಾಗಿರುವುದು ಸಂತಸ ಉಂಟುಮಾಡಿದೆ ಎಂದು ಹೇಳಿ, ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷರು ಮಹಿಳೆಯರಾಗಿದ್ದು ಅವರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡದೇ ಕಾನೂನಿನ ಅಡಿಯಲ್ಲಿ ತಿಳಿ ಹೇಳಿ ಆಡಳಿತ ಸುಗಮಗೊಳಿಸುವಂತೆ ಪಿಡಿಓರಿಗೆ ಕಿವಿ ಮಾತು ಹೇಳಿದರು.


ಗ್ರಾ.ಪಂ. ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಗಣಪತಿ ಗವಟೂರು, ಮಂಜುಳಾ ಕೇತಾರ್ಜಿರಾವ್, ಜಿ.ಡಿ.ಮಲ್ಲಿಕಾರ್ಜುನ, ಪಿ.ರಮೇಶ್,
ಪ್ರಕಾಶ್ ಪಾಲೇಕರ್, ವೇದಾವತಿ, ಅನುಪಮ, ಆಶೀಫ್ ಭಾಷಾ, ಸುಂದರೇಶ್, ಪಿಡಿಓ ಮಧುಸೂದನ್, ಕಛೇರಿಯ ಸಿಬ್ಬಂದಿಗಳಾದ ಮಧುಶ್ರೀ, ಲಕ್ಷ್ಮಿ ನಾಗರಾಜ್, ಮಂಜಪ್ಪ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!