ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಸನ್ಮಾನ

0 202


ಹೊಸನಗರ : ‘ಉಳುವವನೇ ಹೊಲದೊಡೆಯ’ ಕಾನೂನಿನ ಮೂಲಕ ಅನೇಕ ರೈತಾಪಿಗಳ ಸಹಾಯಕ್ಕೆ ಅಂದು ಧಾವಿಸಿದ್ದ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಇತ್ತೀಚೆಗೆ ರಾಜ್ಯದ ಸರ್ಕಾರವು ದಿವಂಗತ ಡಿ. ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಿದ್ದ ಹಿನ್ನಲೆಯಲ್ಲಿ ಜೆಸಿಐ ಕೊಡಚಾದ್ರಿ ಹೊಸನಗರ ಸಪ್ತಾಹ-2023ರ ಸಂದರ್ಭದಲ್ಲಿ ಸಂಸ್ಥೆ ಅವರನ್ನು ಆತ್ಮೀಯವಾಗಿ ಗೌರವಿಸಿತು.

ಈ ವೇಳೆ ಶಾಸಕ ಗೋಪಾಲಕೃಷ್ಣ ಬೇಳೂರು, ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮಾಜಿ ಸದಸ್ಯ ಬಂಡಿ ರಾಮಚಂದ್ರ, ತಾ.ಪಂ. ಮಾಜಿ ಸದಸ್ಯ ಕೋಡೂರು ಚಂದ್ರಮೌಳಿ, ಜೇಸಿಐ ಅಧ್ಯಕ್ಷ ಮೋಹನ್ ಶೆಟ್ಟಿ, ಕಾಯದರ್ಶಿ ಸಂತೋಷ್ ಶೇಟ್, ಪ್ರಮುಖರಾದ ಪ್ರದೀಪ ಕಾಡುವಳ್ಳಿ, ಪ್ರಿಯಾಂಕ ಪೂರ್ಣೇಶ್, ಶೈಲಾ ಕೇಶವ್, ರಾಧಿಕ, ಮಂಜುನಾಥ ಶೆಟ್ಟಿ, ಮಂಡಾನಿ ಗುರು ಸೇರಿದಂತೆ ಹಲವರು ಹಾಜರಿದ್ದರು.

Leave A Reply

Your email address will not be published.

error: Content is protected !!