ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಕರ ಪಾತ್ರ ಬಹಳ ಮುಖ್ಯ ; ಶಾಸಕ ಬೇಳೂರು ಗೋಪಾಲಕೃಷ್ಣ

0 2


ಹೊಸನಗರ: ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಕರ ಪಾತ್ರ ಆ ದೇಶದಲ್ಲಿ ಪ್ರಮುಖವಾಗಿರುತ್ತದೆ ಎಂದು ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರವರು ಹೇಳಿದರು.

ಪಟ್ಟಣದ ಆರ್ಯ ಈಡಿಗರ ಭವನದಲ್ಲಿ ಡಾ|| ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು.


ಹೊಸನಗರ ತಾಲ್ಲೂಕಿನಲ್ಲಿ 41 ಪ್ರೌಢ ಶಾಲೆಗಳಲ್ಲಿ 17 ಶಾಲೆ 100% ಫಲಿತಾಂಶ ಜೊತೆ ಒಟ್ಟು 92.05 % ಫಲಿತಾಂಶ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಈ ತಾಲ್ಲೂಕು ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳು ವ್ಯಾಸಂಗದಲ್ಲಿ ಮುಂದುವರೆದಿರುವುದಕ್ಕೆ ತಾಲ್ಲೂಕಿನ ಶಿಕ್ಷಕರೇ ಕಾರಣರಾಗಿದ್ದು ಮುಂದಿನ ದಿನದಲ್ಲಿ ಶೇಕಡ 100 ಕ್ಕೆ 100 ಫಲಿತಾಂಶ ಬರುವಂತೆ ಮಾಡಿ ರಾಜ್ಯಕ್ಕೆ ಹೊಸನಗರ ತಾಲ್ಲೂಕಿನ ಕೀರ್ತಿ ಬೆಳಗಿಸಬೇಕೆಂದು ಶಿಕ್ಷಕರಿಗೆ ಕರೆ ನೀಡಿದರು.


ಅತೀ ಶೀಘ್ರದಲ್ಲಿಯೇ 13500 ಶಿಕ್ಷಕರನ್ನು ರಾಜ್ಯ ಸರ್ಕಾರ ನೇಮಕ ಮಾಡಿಕೊಳ್ಳಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಶಿಕ್ಷಣ ಇಲಾಖೆಗೆ ಹೆಚ್ಚಿನ ಮಹಾತ್ವ ನೀಡಿ ಶಿಕ್ಷಣ ಕ್ಷೇತ್ರಕ್ಕೆ ಮೆರಗು ನೀಡಲಿದೆ ಎಂದರು.

ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವವರೆ ಗುರುಗಳು ಪ್ರತಿಯೊಬ್ಬರು ಯಾವುದೇ ಪದವಿಗೆ ಹೋದರೂ ಗುರುಗಳ ಋಣ ಎಂದಿಗೂ ತೀರಸಲಾಗದು ವಿಧ್ಯೆಯ ಬುದ್ದಿಯನ್ನು ಕಲಿಸುವ ಮತ್ತು ಜೀವನವನ್ನು ಸ್ಫೂರ್ತಿದಾಯಕವಾಗಿಸುವ ಶಿಕ್ಷಕರು ನಮ್ಮ ದೇಶದಲ್ಲಿ ರಾಜ್ಯದಲ್ಲಿ ಪ್ರತಿ ಜಿಲ್ಲೆ ತಾಲ್ಲೂಕಿನಲ್ಲಿ ಇರುವುದೇ ನಮಗೆ ಹೆಮ್ಮೆ ಎಂದರು.


ಈ ಕಾರ್ಯಕ್ರಮಕ್ಕೆ ತೀರ್ಥಹಳ್ಳಿ, ಹೊಸನಗರ ಶಾಸಕರಾದ ಆರಗ ಜ್ಞಾನೇಂದ್ರರವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೀತಿ ವಾತ್ಸಲ್ಯ ತುಂಬಿ ಯಾವುದು ಒಳ್ಳೆಯದು. ಯಾವುದು ಕೆಟ್ಟದ್ದು ಎಂದು ಮನವರಿಕೆ ಮಾಡಿಕೊಡುವವರೇ ಶಿಕ್ಷಕರು, ಗುರುಗಳನ್ನು ತಂದೆ ತಾಯಿಯರೆಂದು ಭಾವಿಸಿ ಋಣ ತೀರಿಸಿ, ನಿಮ್ಮ ಸಕಾರಾತ್ಮಕ ಆಲೋಚನೆಗಳನ್ನು ಅತ್ಯುತ್ತಮ ಶಿಕ್ಷಕರಾಗಿ ಗುರುತಿಸಿ ಮತ್ತು ಅಭ್ಯಾಸ ಮಾಡುವ ಮೂಲಕ ಅವರನ್ನು ಗೌರವಿಸಿ, ನಿಮ್ಮಿಂದ ಯಾವುದೇ ತಪ್ಪಿಲ್ಲದಿದ್ದರೂ ಟೀಕಿಸುವ ಮೂಲಕ ನಿಮಗೆ ಜೀವನದ ಪಾಠವನ್ನು ಕಲಿಸಿದ ಶಿಕ್ಷಕರಿಗೆ ನಿಮ್ಮ ಜೀವನದ ಕೊನೆಯವರೆವಿಗೂ ಅಭಿನಂದಿಸಿ ಗೌರವಿಸಿ ಎಂದರು.


ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಂಗಸ್ವಾಮಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರೇಣುಕೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕುಬೇಂದ್ರಪ್ಪ, ರಾಜುಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರರಾವ್, ಸಹಾಯಕ ನಿರ್ದೇಶಕ ಎಸ್.ಪಿ ನಾಗರಾಜ್, ಸಮನ್ವಯಾಧಿಕಾರಿ ಎಂ ರಂಗನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್ ಕೃಷ್ಣಮೂರ್ತಿ, ಶಿಕ್ಷಕರ ಸಂಘದ ಕಾರ್ಯದರ್ಶಿ ಆಲ್ತಾಫ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಸಾಗರದ ಡಾ|| ಸಫ್ರಾಜ್ ಚಂದ್ರಗುತ್ತಿಯವರಿಂದ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Leave A Reply

Your email address will not be published.

error: Content is protected !!