ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿಗೆ ಸನ್ಮಾನ

0 1

ರಿಪ್ಪನ್‌ಪೇಟೆ: ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಅನ್ವಿತಾ ಡಿ.ಎನ್.ಇವಳನ್ನು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಅಭಿನಂದಿಸಿ ಶಾಲು ಹಾಕಿ ಗುರುರಕ್ಷೆ ನೀಡಿದರು.

ನಂತರ ಶ್ರೀಗಳು ಆಶೀರ್ವಚನ ನೀಡಿ, ಮಲೆನಾಡಿನ ಬಡ ಕೃಷಿಕನ ಪುತ್ರಿಯ ಈ ಸಾಧನೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಮನೆಯಲ್ಲಿ ಬಡತನ ಇದ್ದರು ಕೂಡಾ ವ್ಯಾಸಂಗದ ಸಮಯದಲ್ಲಿ ಆದರ ಕಡೆ ಹೆಚ್ಚು ಚಿಂತಿಸದೇ ಓದಿನಲ್ಲಿ ಆಸಕ್ತಿ ವಹಿಸಿದ್ದಾಗ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯೆಂಬುದಕ್ಕೆ ಈ ಬಾಲಕಿ ಮಾದರಿಯಾಗಿದ್ದಾಳೆಂದು ಹೇಳಿ, ಅವಳಿಗೆ ಮುಂದೆ ಒಳ್ಳೆಯ ಅವಕಾಶಗಳಿವೆ ಅದನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ಮನೋಭಾವನೆ ಬೆಳಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಮಠದ ಭಕ್ತರಾದ ತಮ್ಮಣ್ಣಪ್ಪಗೌಡ, ಅಬ್ಬಿಕಿರಣ್, ಮನೋಜ್ ಕುಮಾರ್,‌ ಕೆ.ಎಸ್.ಪ್ರಶಾಂತ್‌ ಸಾಗರ, ರಾಜಶೇಖರ್ ಹಾಲಂದೂರು, ವಸಂತಮ್ಮ, ಅನುಸೂಯ, ಇನ್ನಿತರಿದ್ದರು.

Leave A Reply

Your email address will not be published.

error: Content is protected !!