ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸನ್ಮಾನ | ಸಾವಿರ ಬಾರಿ ಸೋಲುಂಡರು ಹೋರಾಟದಿಂದ ಯಶಸ್ಸು ಸಾಧ್ಯ

0 572

ರಿಪ್ಪನ್‌ಪೇಟೆ: ಯಾವುದೇ ಒಳ್ಳೆಯ ಕಾರ್ಯ ಮಾಡುವಾಗ ಸಾಕಷ್ಟು ಸಂಕಷ್ಟಗಳು ಎದುರಾಗಿ ಸೋಲುವಂತಾಗಿದೆ. ಆದರೆ ಒಂದಲ್ಲ ಒಂದು ಬಾರಿ ನಮಗೆ ಜಯ ದೊರುಕುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಗದಗ (Gadaga) ವಿಜಯನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀಸ್ವಾಮಿ ನಿರ್ಭಯಾನಂದ ಸ್ವಾಮಿಜಿ ವಿದ್ಯಾರ್ಥಿಗಳಿಗೆ (Student’s) ಕರೆ ನೀಡಿದರು.

ರಿಪ್ಪನ್‌ಪೇಟೆಯ (Ripponpet) ಶ್ರೀ ಶಾರದ ರಾಮಕೃಷ್ಣ ವಿದ್ಯಾಲಯಕ್ಕೆ ಭೇಟಿ ನೀಡಿ ಇತ್ತೀಚೆಗೆ ನಡೆದ ವಿಭಾಗ ಮಟ್ಟದ ಕಬಡ್ಡಿ (Kabaddi) ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಮತ್ತು ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ತತ್ಸಂಗ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಅಮೇರಿಕಾದಂತಹ ರಾಷ್ಟ್ರದಲ್ಲಿ ಉನ್ನತ ವ್ಯಾಸಂಗ ಮಾಡುವವರು ಅತಿ ಹೆಚ್ಚು ಅಂಕಗಳಿಸಿ ಟಾಪರ್ ಅಗಿರುವವರಲ್ಲಿ ಭಾರತೀಯರೇ ಹೆಚ್ಚು ಎಂದು ಹೇಳಿ ಭಾರತೀಯರು ಸಾಮಾನ್ಯರಲ್ಲ ಎಂಬುದನ್ನು ಅಮೇರಿಕಾ ದೇಶವೇ ಪ್ರಶಂಸಿಸುವಂತೆ ಮಾಡಿದ್ದಾರೆಂದು ಹೇಳಿ, ನಮ್ಮ ಶಾಲೆಯ ವಿದ್ಯಾರ್ಥಿಗಳ ಕ್ರೀಡಾ ಸಾಧನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು. ನಮ್ಮ ಶರೀರದಲ್ಲಿ ನಮಗೆ ಗೊತ್ತಿಲ್ಲದಂತೆ ಬದಲಾವಣೆಗಳು ಆಗುತ್ತಿರುತ್ತವೆ. ನಮ್ಮ ಮನಸ್ಸು ನಿಗ್ರಹಗೊಳಿಸಿಕೊಂಡು ಏಕಾಗ್ರತೆಯಿಂದ ಇದ್ದರೆ ಏನು ಬೇಕಾದರು ಸಾಧನೆ ಮಾಡಬಹುದು ಎಂಬುದನ್ನು ಸ್ವಾಮಿ ವಿವೇಕಾನಂದರು ತಿಳಿಸಿಕೊಟ್ಟಿದ್ದಾರೆ. ಅವರ ತತ್ವಾದರ್ಶಗಳನ್ನು ನಮ್ಮ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಸೋಲು ಎಂಬುದು ಬರುವುದಿಲ್ಲ ಎಂದರು.

ಬೆಂಗಳೂರು ಯಲಹಂಕ ರಾಮಕೃಷ್ಣ ವೇದಾಂತ ಆಶ್ರಮದ ಅಭಯಾನಂದಜಿ ಮಹಾರಾಜ್, ಹೊಸನಗರ ತಾಲ್ಲೂಕಿನ ಸುಳಗೋಡು ಶ್ರೀರಾಮಕೃಷ್ಣ ಯೋಗಪೀಠದ ಶ್ರೀಸ್ವಾಮಿ ಪ್ರಕಾಶನಂದಜೀ ಮಹಾರಾಜ್ ನೇತೃತ್ವ ವಹಿಸಿದ್ದರು.
ಶ್ರೀಶಾರದ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ದೇವರಾಜ್ ಅಧ್ಯಕ್ಷತೆ ವಹಿಸಿದ್ದರು.

ಸುರಕ್ಷಾ ಮತ್ತು ತಂಡದವರಿಂದ ಶ್ಲೋಕ ಗೀತೆ ನಡೆಯಿತು. ಕುಮಾರಿ ನವ್ಯ ಪ್ರಾರ್ಥಿಸಿದರು. ಶಾರದ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಡಿ.ಎಂ.ದೇವರಾಜ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಾಜ ವಂದಿಸಿದರು.

Leave A Reply

Your email address will not be published.

error: Content is protected !!