ರಾಜ್ಯ ಸರ್ಕಾರಿ ನೌಕರರ ಸಂಘದ ಅನಿರ್ದಿಷ್ಟಾವಧಿ ಮುಷ್ಕರ ; ಹೊಸನಗರ ತಾಲ್ಲೂಕಿನ 1200 ನೌಕರರು ಭಾಗಿ, ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಕೆಲಸ ಕಾರ್ಯ ಸ್ಥಗಿತ

0 0


ಹೊಸನಗರ: ರಾಜ್ಯದ ಸರ್ಕಾರಿ ನೌಕರರು ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಯವರ ನೇತೃತ್ವದಲ್ಲಿ ಮಾರ್ಚ್ 1ರಿಂದ ತಮ್ಮ ಬೇಡಿಕೆಯನ್ನು ಈಡೇರಿಸ ಬೇಕೆಂದು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು ಇವರಿಗೆ ಬೆಂಬಲವಾಗಿ ಹೊಸನಗರ ತಾಲ್ಲೂಕಿನ 1200 ರಾಜ್ಯ ಸರ್ಕಾರಿ ನೌಕರರು ತಮ್ಮ ಕಛೇರಿಗೆ ಗೈರು ಹಾಜರಾತಿ ಮೂಲಕ ಬೆಂಬಲ ಸೂಚಿಸಿದ್ದಾರೆ ಎಂದು ಹೊಸನಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಬಸವಣ್ಯಪ್ಪನವರು ತಿಳಿಸಿದ್ದಾರೆ.


ಹೊಸನಗರದ ಬಸ್ ಸ್ಟ್ಯಾಂಡ್ ಸಮೀಪವಿರುವ ಸರ್ಕಾರಿ ನೌಕರರ ಕಛೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ನಾವು ಸುಮಾರು 5ವರ್ಷಗಳಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳಾದ ವೇತನ-ಭತ್ಯೆಗಳ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಆಗಾಗ ಸರ್ಕಾರದ ಗಮನಕ್ಕೆ ತಂದರೂ ಇಲ್ಲಿಯವರೆವಿಗೆ ಸರ್ಕಾರದಿಂದ ಯಾವುದೇ ಸೌಲತ್ತು ನೀಡುವುದಾಗಲೀ ಅಥವಾ ಸಭೆ ನಡೆಸಿ ತೀರ್ಮಾನಕ್ಕೆ ಬರುವುದಾಗಲೀ ಮಾಡುತ್ತಿಲ್ಲ ಈ ವರ್ಷದ ಬಜೆಟ್‌ನಲ್ಲಿಯೂ ಸೇರಿಸಿಲ್ಲ ಬಜೆಟ್‌ನಲ್ಲಿ ಸೇರಿಸದ ವಿಷಯವನ್ನು ಜಾರಿಗೆ ತರುವುದಾದರೂ ಹೇಗೆ ಎಂದು ನಮ್ಮ ಬೇಡಿಕೆಗಳಾದ ಶೇ.40% ರಷ್ಟು ಹೆಚ್ಚಳ ಹಾಗೂ ಹಳೇ ಪಿಂಚಣಿ ಜಾರಿ ಬರುವವರೆವಿಗೆ ಮುಷ್ಕರ ಕೈ ಬೀಡುವ ಪ್ರಶ್ನೆಯೇ ಇಲ್ಲ ನಮ್ಮ ಬೇಡಿಕೆ ಈಡೇರಿಸುವವರೆಗೆ ಮುಷ್ಕರ ನಡೆಸುತ್ತೇವೆ ಎಂದರು.


ಹೊಸನಗರ ಪ್ರಾಥಮಿಕ ಪಾಠ ಶಾಲೆಯ ತಾಲ್ಲೂಕು ಅಧ್ಯಕ್ಷರಾದ ಹೆಚ್.ಆರ್. ಸುರೇಶ್‌ರವರು ಮಾತನಾಡಿ, ಕೇಂದ್ರ ಸರ್ಕಾರ ನೀಡುತ್ತಿರುವ ಸಂಬಳದಷ್ಟೇ ನಮಗೆ ನೀಡಬೇಕು ಕರ್ನಾಟಕ ರಾಜ್ಯದಲ್ಲಿ 61% ರಾಜ್ಯ ಸರ್ಕಾರಿ ನೌಕರರು ಕೆಲಸ ನಿರ್ವಹಿಸುತ್ತಿದ್ದು 39% ಖಾಲಿ ಇರುವ ಕೆಲಸವನ್ನು 61% ನೌಕರರು ಹೆಚ್ಚುವರಿ ಕೆಲಸ ನಿರ್ವಹಿಸುತ್ತಿದ್ದಾರೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಎಲ್ಲ ರಾಜ್ಯ ಸರ್ಕಾರಿ ನೌಕರರ ಸಂಬಳಕ್ಕಿಂತ ಕಡಿಮೆಯಿದೆ ನಮ್ಮಿಂದ ಹೆಚ್ಚು ಕೆಲಸ ಮಾಡಿಕೊಳ್ಳುವ ಸರ್ಕಾರ ನಮಗೆ ಸಂಬಳ ಕಡಿಮೆ ನೀಡುತ್ತಿದೆ ಸಾರ್ವಜನಿಕರಿಗೆ ಸರ್ಕಾರಿ ನೌಕರರ ಕಷ್ಟ ತಿಳಿಯುತ್ತಿಲ್ಲ ರಾಜ್ಯ ಸರ್ಕಾರ ಸರ್ಕಾರಿ ನೌಕರಿಗೆ ಸಾಕಷ್ಟು ಸಂಬಳ ನೀಡುತ್ತಿದ್ದಾರೆ ಎಂದು ತಿಳಿದುಕೊಂಡಿದ್ದಾರೆ ನಮಗೆ ಕೇಂದ್ರ ಸರ್ಕಾರದ ನೌಕರರಿಗೆ ನೀಡುವ ಸಂಬಳದಷ್ಟೆ ಕೊಡಬೇಕು ಹಾಗೂ ಹಳೇ ಪಿಂಚಣಿಯನ್ನು ಜಾರಿ ಮಾಡಬೇಕೆಂದು ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.


ಈ ಪತ್ರಿಕಾಘೋಷ್ಟಿಯಲ್ಲಿ ಸಂಘದ ಗೌರವಾಧ್ಯಕ್ಷರಾದ ಜಗದೀಶ ಕಾಗಿನೆಲೆ, ಶಿಕ್ಷಕರ ಸಂಘದ ಅಧ್ಯಕ್ಷರಾದ ಹೆಚ್.ಆರ್. ಸುರೇಶ್, ಕಾರ್ಯದರ್ಶಿಯಾದ ಮಲ್ಲಿಕಾರ್ಜುನಸ್ವಾಮಿ, ಖಜಾಂಚಿಯಾದ ಪ್ರಭಾಕರ್, ಪ್ರೌಢ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷರಾದ ರೇಣುಕೇಶ್, ಡಾ|| ಸುರೇಶ್, ಕಾರ್ಯದರ್ಶಿ ಸ್ವಾಮಿರಾವ್, ಮಾಲತೇಶ್, ಪುಟ್ಟಣ, ನಟರಾಜ್, ಮಹಮದ್ ಆಲ್ತಾಫ್, ಗಜೇಂದ್ರ, ಗಣಪತಿ, ರಾಜು, ಗಂಗಾಧರಯ್ಯ, ಮಾಲತೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!