ರಾಷ್ಟ್ರೀಯ ವಾಲಿಬಾಲ್ ತರಬೇತುದಾರ ಜಾನ್ ವಿಲ್ಸನ್ ಗೋನ್ಸಾಲ್ವಿಸ್ ನಿಧನ

0 0


ಹೊಸನಗರ : ಜ್ಯೂನಿಯರ್ ವಿಭಾಗದಲ್ಲಿ ಕೆಲಕಾಲ ರಾಷ್ಟ್ರೀಯ ವಾಲಿಬಾಲ್ ತರಬೇತಿದಾರ ಆಗಿ ಸೇವೆ ಸಲ್ಲಿಸಿದ್ದ, ವಾಲಿಬಾಲ್ ಜೋನ ಎಂದು ರಾಜ್ಯವ್ಯಾಪ್ತಿ ಖ್ಯಾತರಾಗಿದ್ದ ಪಟ್ಟಣದ ಕ್ರಿಸ್ಚಿಯನ್ ಕಾಲೋನಿ ನಿವಾಸಿ ಜಾನ್ ವಿಲ್ಸನ್ ಗೋನ್ಸಾಲ್ವಿಸ್ (59) ಶಿವಮೊಗ್ಗದಲ್ಲಿ ನಿಧನ ಹೊಂದಿದ್ದಾರೆ.


ಕೆಲವು ದಶಕಗಳ ಹಿಂದೆ ಬಟ್ಟೆಗಳ ಬ್ಯಾನರ್ ಮೇಲೆ ತಮ್ಮ ಮುದ್ದು ಅಕ್ಷರಗಳ ಬರೆಯುವ ಮೂಲಕ ಬದುಕು ಕಟ್ಟಿಕೊಂಡಿದ್ದ ಅವರು, ನಂತರ ಸ್ಥಳೀಯ ಖಾಸಗಿ ಶಾಲೆಗಳಲ್ಲಿ ವಾಲಿಬಾಲ್ ತರಬೇತುದಾರರಾಗಿ ಸೇವೆ ಸಲ್ಲಿಸಿ, ತಾಲೂಕು, ಜಿಲ್ಲೆಯ ಅನೇಕ ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡಿ ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನಾಗಿ ಪರಿವರ್ತಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.


ವಾಲಿಬಾಲ್ ಕ್ರೀಡಾ ವಿಭಾಗದ ರಾಷ್ಟ್ರೀಯ ತರಬೇತುದಾರ ಹಾಗೂ ತೀರ್ಪುಗಾರ ಆಗಿದ್ದ ಜಾನ್, ಉತ್ತಮ ಸ್ನೇಹ ಜೀವಿ. ಈ ಹಿಂದೆ ಪಟ್ಟಣದ ಶ್ರೀನಿಧಿ ಫೈನಾಸ್ಸ್, ಸ್ಪೋಟ್ಸ್ ಅಸೋಸಿಯೇಷನ್, ಕುವೆಂಪು ವಿದ್ಯಾಸಂಸ್ಥೆಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದರು. ಮೃತರು ಕೆಲವು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿದ್ದು, ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.


ಸ್ಥಳೀಯ ಜಿಮ್ಮಿ ಜಾರ್ಜ್ ವಾಲಿಬಾಲ್ ಸಂಸ್ಥೆ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಮೃತರ ಆತ್ಮಕ್ಕೆ ಶಾಂತಿ ಕೋರಿವೆ.

Leave A Reply

Your email address will not be published.

error: Content is protected !!