ರಾಹುಲ್ ಗಾಂಧಿಯವರ ಲೋಕಸಭೆಯ ಸದಸ್ಯತ್ವ ರದ್ದು ; ಹೊಸನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

0 0


ಹೊಸನಗರ: ಲೋಕಸಭೆಯ ಸದಸ್ಯ ರಾಹುಲ್ ಗಾಂಧಿಯವರ ಸದಸ್ಯತ್ವವನ್ನು ರದ್ದು ಮಾಡಿರುವ ಕ್ರಮವನ್ನು ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬಿ.ಜಿ.ನಾಗರಾಜ್‌ರವರ ನೇತೃತ್ವದಲ್ಲಿ ಹೊಸನಗರ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.


ನಂತರ ಮಾತನಾಡಿದ ಬಿ.ಜಿ.ನಾಗರಾಜ್‌, ಬಿಜೆಪಿ ಸರ್ಕಾರ ಹಿಂದಿನಿಂದಲೂ ಹಾಗೆತನ ಸಾಧಿಸಿಕೊಂಡು ಬರುತ್ತಿದ್ದು ಬಿಜೆಪಿ ಪಕ್ಷದವರಿಗೆ ಬೇರೆ ಪಕ್ಷದವರನ್ನು ಕಂಡರೆ ಆಗುವುದಿಲ್ಲ ಬಿಜೆಪಿ ಶಾಸಕರ ಮನೆಯಲ್ಲಿ ಕೋಟಿಗಟ್ಟಲೇ ಹಣ ಸಿಕ್ಕಿದರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವವರು ಕಾಂಗ್ರೆಸ್ ಪಕ್ಷದ ಸದಸ್ಯರ ಅಥವಾ ಕಾರ್ಯಕರ್ತರ ಸಣ್ಣ-ಸಣ್ಣ ತಪ್ಪುಗಳನ್ನು ದೊಡ್ಡದು ಮಾಡುತ್ತಿದ್ದಾರೆ ಮುಂದಿನ ದಿನದಲ್ಲಿ ಜನರೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.


ಈ ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಮಾಜಿ ಅಧ್ಯಕ್ಷರಾದ ಶ್ರೀನಿವಾಸ್ ಕಾಮತ್, ರಾಜಮೂರ್ತಿ, ಗುರುರಾಜ್, ಎರಗಿ ಉಮೇಶ್, ಎಂ.ಪಿ ಸುರೇಶ್,ಜಯನಗರ ಗುರು, ಜಯಶೀಲಪ್ಪ ಗೌಡ, ಗೂಲ್ಲೋಡಿ ಮಹಮದ್ ಸಾಬ್, ಷಣ್ಮುಖಪ್ಪ ವಕೀಲರು, ಗೋಪಾಲ್, ಕಳೂರು ಕೃಷ್ಣಮೂರ್ತಿ, ಗೋಪಿ, ಸಣ್ಣಕ್ಕಿ ಮಂಜು, ಅಶ್ವಿನಿಕುಮಾರ್, ಬೃಂದಾವನ ಪ್ರವೀಣ್, ನಿತ್ಯಾನಂದ ಹೆಚ್.ಎಂ ಇನ್ನೂ ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!