ರಿಪ್ಪನ್‌ಪೇಟೆ ಬಳಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ ; ₹ 14 ಸಾವಿರ ನಗದು ಸಹಿತ 08 ಮಂದಿ ವಶಕ್ಕೆ

0 430

ರಿಪ್ಪನ್‌ಪೇಟೆ : ಪಟ್ಟಣದ ಹೊರವಲಯದ ಗವಟೂರು ಗ್ರಾಮದ ಖಾಸಗಿ ಕಟ್ಟಡದ ಹಿಂಭಾಗದಲ್ಲಿ ಹಣವನ್ನು ಪಣಕಿಟ್ಟು ಕಾನೂನು ಬಾಹಿರವಾಗಿ ಇಸ್ಪೀಟ್ ಆಡುತ್ತಿದ್ದ ಅಡ್ಡೆ ಮೇಲೆ ರಿಪ್ಪನ್‌ಪೇಟೆ ಪೊಲೀಸರು ದಾಳಿ ನಡೆಸಿ 14,700 ನಗದು ಸಹಿತ 08 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಗವಟೂರು ಗ್ರಾಮದ ಖಾಸಗಿ ಕಟ್ಟಡವೊಂದರ ಹಿಂಭಾಗದಲ್ಲಿ ಅಂದರ್ ಬಾಹರ್ ಆಡುತ್ತಿರುವ ಬಗ್ಗೆ ಖಚಿತ ಪಡೆದ ಪೊಲೀಸರು ದಿಢೀರ್ ದಾಳಿ ನಡೆಸಿ ಜೂಜಾಟಕ್ಕೆ ತೊಡಗಿಸಿಕೊಂಡಿದ್ದ 14,700 ರೂ. ನಗದು, 52 ಇಸ್ಪೀಟ್ ಎಲೆ, ಚಾರ್ಜರ್ ಲೈಟ್ ಸಹಿತ ಆರೋಪಿಗಳಾದ ಉಜ್ಜಪ್ಪಗೌಡ, ವಿಜಯ್ ಕುಮಾರ್, ಚಂದ್ರಾಚಾರ್ಯ, ರಮೇಶ್, ಮಂಜುನಾಥ, ನವೀನ್ ಹಾಗೂ ಸೋಮಶೇಖರ್ ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

ಎಸ್‌ಪಿ ಮಿಥುನ್ ಕುಮಾರ್ ಜಿ.ಕೆ, ಎಎಸ್‌ಪಿ ಅನಿಲ್ ಕುಮಾರ್ ಎನ್ ಬೂಮರೆಡ್ಡಿ, ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್‌ಪಿ ಗಜಾನನ ಎಂ ಸುತಾರ, ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಮಾರ್ಗದರ್ಶನದಲ್ಲಿ ರಿಪ್ಪನ್‌ಪೇಟೆ ಪಿಎಸ್ಐ ಪ್ರವೀಣ್ ಎಸ್.ಪಿ. ಮತ್ತು ಸಿಬ್ಬಂದಿಗಳಾದ ಉಮೇಶ್, ಶಿವಕುಮಾರ್, ಚೆನ್ನಪ್ಪ, ಮಧುಸೂಧನ್ ಹಾಗೂ ಇನ್ನಿತರರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!