ಲವ್, ಸೆಕ್ಸ್ ದೋಖದ ಮೂಲಕ ಮಗುವನ್ನು ದಯಪಾಲಿಸಿ ನಾಪತ್ತೆಯಾಗಿದ್ದ ಖದೀಮ ಅಂದರ್ !

0 1,610

ರಿಪ್ಪನ್‌ಪೇಟೆ : ಯುವತಿಯನ್ನು ಪ್ರೀತಿಸಿ (Love) ಮದುವೆ (Marriage) ಆಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿ (Rape) ಪರಾರಿಯಾಗಿದ್ದ ಆರೋಪಿಯನ್ನು ರಿಪ್ಪನ್‌ಪೇಟೆ ಪೊಲೀಸರು (Ripponpet Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸನಗರ (Hosanagara) ತಾಲೂಕಿನ ಕೋಡೂರು (Kodur) ಗ್ರಾ.ಪಂ. ವ್ಯಾಪ್ತಿಯ 24ನೇ ಮೈಲಿಕಲ್ಲಿನ ಪ್ರತಾಪ್ (26) ಬಂಧಿತ ಆರೋಪಿಯಾಗಿದ್ದಾನೆ.

ಕೋಡೂರು ಗ್ರಾಪಂ ವ್ಯಾಪ್ತಿಯ ಯುವತಿಯೊಬ್ಬಳ್ಳನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ ಮೇಲೆ ನಾನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ಪರಾರಿಯಾಗಿದ್ದ ಆರೋಪಿಯನ್ನು ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಿವಕುಮಾರ್ ನಾಯ್ಕ್ , ಉಮೇಶ್ ಹಾಗೂ‌ ಮಧುಸೂದನ್ ಇದ್ದರು.

ಖತರ್ನಾಕ್ ಯುವಕನ ಮಾತಿಗೆ ಮರುಳಾದ ಯುವತಿ !!
ಯುವಕನ ಮೋಸದ ಬಲೆಗೆ ಆಗಷ್ಟೇ ಯೌವನಕ್ಕೆ ಕಾಲಿಟ್ಟಿದ್ದ ಆ ಯುವತಿ ಆತನ ಮಾತಿಗೆ ಮರುಳಾಗಿ ತನ್ನ ಸರ್ವಸ್ವವನ್ನೇ ಆತನಿಗೆ ಅರ್ಪಿಸಿದ್ದಳು.


ದೊಡ್ಡಪ್ಪನ ಮಗ ಸೋಮಶೇಖರನೊಂದಿಗೆ ಆರೋಪಿ ಪ್ರತಾಪ್ ನು ಯುವತಿಯ ಮನೆಗೆ ಬರುತ್ತಿದ್ದ ಹಿನ್ನಲೆಯಲ್ಲಿ ಪ್ರತಾಪ್ ಪರಿಚಯವಾಗಿದ್ದನು. ಆಮೇಲೆ ಅವರಿಬ್ಬರೂ ಸಿಕ್ಕಾಗ ಮಾತನಾಡುತ್ತಿದ್ದರು. ಹೀಗೆ ಸಲುಗೆ ಹೆಚ್ಚಾಗಿ ಇಬ್ಬರಲ್ಲಿ ಪ್ರೇಮಾಂಕುರವಾಗಿತ್ತು. ನಂತರ ಆರೋಪಿ ಪ್ರತಾಪ್ ಯುವತಿಗೆ ನಾನು ನಿನ್ನನ್ನು ಮದುವೆಯಾಗುತ್ತೇನೆ ಅಂತ ಪುಸಲಾಯಿಸಿ ಯುವತಿ ಬೇಡವೆಂದರೂ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಹೀಗೆ ಮೂರ್ನಾಲ್ಕು ಬಾರಿ ದೈಹಿಕ ಸಂಪರ್ಕ ಬೆಳೆಸಿದನು. ನಂತರ ಯುವತಿ 4 ತಿಂಗಳಾದರೂ ಋತುಮತಿ ಆಗದೇ ಇದ್ದುದ್ದರಿಂದ ಅನುಮಾನ ಬಂದು ಪ್ರತಾಪ್ ನಿಗೆ ಯುವತಿ ಆಸ್ಪತ್ರೆಗೆ ತೋರಿಸೋಣ ಬಾ ಎಂದಿದ್ದಾಳೆ. ನಂತರ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಹಾಗೂ ನಿನ್ನ ಅಪ್ಪನನ್ನು ಸಾಯಿಸುತ್ತೇನೆ. ವಿಡಿಯೋ ಮಾಡಿ ಫೇಸ್‍ಬುಕ್ ಗೆ ಹಾಕುತ್ತೇನೆ ಎಂದು ಬೆದರಿಕೆ ಹಾಕಿ ನಂತರ ಫೋನ್ ನಂಬರ್‌ ನ್ನು ಬ್ಲ್ಯಾಕ್ ಮಾಡಿದ್ದಾನೆ.

ಯುವತಿ ಗರ್ಭಿಣಿಯಾದ ವಿಷಯ ತಿಳಿಯುತ್ತಿದ್ದಂತೆ ನಾನು ಆ ಮಗುವಿಗೆ ಕಾರಣನಲ್ಲ ಬೇರೆ ಯಾರೋ ಇರಬೇಕು ಎಂದು ಸುಳ್ಳು ಹೇಳಲು ಶುರು ಮಾಡಿದ್ದು ಹಾಗೂ ಹೀಗೂ 6 ತಿಂಗಳು ಕಳೆದಿರುತ್ತೆ. ಯುವತಿಯ ದೇಹದಲ್ಲಿ ಬದಲಾವಣೆಯಾದಾಗ ಕುಟುಂಬಸ್ಥರ ಗಮನಕ್ಕೆ ಈ ವಿಚಾರ ಬಂದ ಹಿನ್ನಲೆಯಲ್ಲಿ ಯುವತಿ ಎಲ್ಲಾ ವಿಷಯ ಹೇಳಿದ್ದಾಳೆ.

ಕುಟುಂಬಸ್ಥರು ಆತನ ಬಳಿ ವಿಚಾರಿಸಿದಾಗ ಮಗುವಿಗೆ ಕಾರಣ ಯಾರೋ ಇರಬೇಕು ಎಂದು ಉಡಾಫೆಯಾಗಿ ಉತ್ತರ ಕೊಟ್ಟಿದ್ದಾನೆ. ನಂತರ ಯುವತಿಗೆ ಏಳೂವರೆ ತಿಂಗಳಿಗೆ ಹೊಟ್ಟೆ ನೋವು ಜಾಸ್ತಿಯಾಗಿ ಹೊಸನಗರ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ತೂಕ ಕಡಿಮೆಯಿದ್ದುದ್ದರಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿ ಆಗ ಕುಟುಂಬಸ್ಥರು ದೂರು ಕೊಡಲು ಹೊರಟಾಗ ಆರೋಪಿ ಪ್ರತಾಪ್ ಮೆಗ್ಗಾನ್ ಆಸ್ಪತ್ರೆಗೆ ಬಂದು ಇದಕ್ಕೆಲ್ಲ ನಾನೇ ಕಾರಣ ನಾನು ಮದುವೆಯಾಗುತ್ತೇನೆ ದೂರು ಕೊಡುವುದು ಬೇಡ ಎಂದು ತಿಳಿಸಿದ್ದಾನೆ ಆ ಹಿನ್ನಲೆಯಲ್ಲಿ ದೂರು ಕೊಟ್ಟಿರಲಿಲ್ಲ.

ಇದಾದ ನಂತರ ಪ್ರತಾಪ್ ಊರು ಬಿಟ್ಟು ಬೆಂಗಳೂರಿಗೆ ಹೋಗಿ ಅಲ್ಲಿಯೇ ಇದು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದನು. ಈ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.

ಯುವತಿಯನ್ನು ನಂಬಿಸಿ ಮೋಸ ಮಾಡಿದ್ದ ಯುವಕನನ್ನು ರಿಪ್ಪನ್‌ಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave A Reply

Your email address will not be published.

error: Content is protected !!