ವಿರೋಧಿಗಳಿಗೆ ನನ್ನ ಬಗ್ಗೆ ಟೀಕೆ ಮಾಡುವುದೇ ಒಂದು ಚಟವಾಗಿದೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಚುನಾವಣೆ ಪ್ರಚಾರ ಮಾಡಿ ; ಕಾರ್ಯಕರ್ತರಿಗೆ ಹರತಾಳು ಹಾಲಪ್ಪ ಸಲಹೆ

0 0


ಹೊಸನಗರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಮ್ಮ ಪಕ್ಷದ ಬಗ್ಗೆ ಟೀಕೆ ಮಾಡುವುದು ನನ್ನ ಬಗ್ಗೆ ಅಪಪ್ರಚಾರ ಮಾಡುವುದು ವಿರೋಧಿಗಳ ಕೆಲಸವಾಗಿದೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೇ ಚುನಾವಣೆಯ ಕೆಲಸ ಮಾಡಿ ಗೆದ್ದ ಮೇಲೆ ವಿರೋಧಿಗಳಿಗೆ ಅದೇ ಉತ್ತರವಾಗಿರಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಹರತಾಳು ಹಾಲಪ್ಪನವರು ಸಲಹೆ ನೀಡಿದರು.

ಪಟ್ಟಣದ ಬಿಜೆಪಿ ಕಛೇರಿಯ ಆವರಣದಲ್ಲಿ ಟೌನ್ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಿಜೆಪಿಯಲ್ಲಿ ಸಾಕಷ್ಟು ಕಾರ್ಯಕರ್ತರ ಪಡೆಯಿದೆ ಚುನಾವಣೆ ನಾವು ಚುನಾವಣೆ ಎದುರಿಸಲು ನಮಗೆ ಕಷ್ಟವಿಲ್ಲ ಆದರೆ ಉಳಿದಿರುವ 20 ದಿನಗಳು ಹಗಲು, ರಾತ್ರಿ ಮನೆ-ಮನೆಗೆ ತೆರಳಿ ಮತಯಾಚನೆ ಮಾಡಬೇಕು ಹಾಗೂ ನಮ್ಮ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿಯ ಕೆಲಸಗಳನ್ನು ಮಾಡುವುದರ ಜೊತೆಗೆ ಮುಂದೆ ಗ್ರಾಮಗಳಲ್ಲಿ ಯಾವ ಕೆಲಸಗಳು ಬಾಕಿ ಇದೆ ಎಂದು ಪಟ್ಟಿ ಮಾಡಿಕೊಳ್ಳಬೇಕು ಎಂದರು.


ವಿರೋಧಿಗಳು ಎಷ್ಟೆ ಅಪಪ್ರಚಾರ ಮಾಡಿದರೂ ನಾವು ನಮ್ಮ ಕಾರ್ಯಕರ್ತರು ಹೆದರುವ ಪ್ರಶ್ನೆಯೇ ಇಲ್ಲ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ ನಾನು ಹೊಸನಗರ-ಸಾಗರ ಕ್ಷೇತ್ರದಲ್ಲಿ ಗೆದ್ದೆ ಗೆಲ್ಲುತ್ತೇನೆ ಎಂದರು.


ಈ ಸಭೆಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡು, ಉಮೇಶ್ ಕಂಚುಗಾರ್, ಎನ್.ಆರ್ ದೇವಾನಂದ, ಟೌನ್ ಅಧ್ಯಕ್ಷ ಎನ್ ಶ್ರೀಧರ ಉಡುಪ, ಟೌನ್ ಘಟಕದ ಅಧ್ಯಕ್ಷ ಕೋಣೆಮನೆ ಶಿವಕುಮಾರ್, ವಿ.ಸತ್ಯನಾರಾಯಣ, ಸಿಮೆಂಟ್ ವಿ, ಹೆಚ್.ಎಸ್. ಮಂಜುನಾಥ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!