ದುಮ್ಮ ಡಾ|| ಡಿ.ವಿ.ರೇವಣ್ಣಪ್ಪ ಗೌಡ ರವರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ಪ್ರದಾನ

0 1


ಹೊಸನಗರ: ತಾಲ್ಲೂಕಿನ ದುಮ್ಮ ಡಾ|| ರೇವಣ್ಣಪ್ಪ ಗೌಡರವರಿಗೆ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ವಿಶ್ವೇಶ್ವರಯ್ಯ ರಾಷ್ಟ್ರೀಯ ಸದ್ಭಾವನ ರಾಷ್ಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಟಾನ ಸಂಸ್ಥೆಯವರು ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ 11ನೇ ಸಮ್ಮೇಳನ ಮತ್ತು ಭಾರತೀಯ ಶಿಕ್ಷಣ ಮತ್ತು ಸಾಂಸ್ಕೃತೀಕ ನೀತಿ ಒಂದು ಚಿಂತನೆ ಎಂಬುವುದರ ಬಗ್ಗೆ ಸಾಹಿತ್ಯ ಭವನ ಕೊಪ್ಪಳದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಈ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಇವರು ಮಾನವ ಹಕ್ಕುಗಳ ಹೋರಾಟಗಾರರು ಧಾರ್ಮಿಕ ಮುಖಂಡರು ಹಾಗೂ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಜೊತೆಗೆ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವುದರಲ್ಲಿ ಸಮಾಜಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದು ಇವರ ಈ ಸಮಾಜ ಸೇವೆಗಾಗಿ ಈ ಪ್ರಶಸ್ತಿ ನೀಡಲಾಗಿದೆ.

Leave A Reply

Your email address will not be published.

error: Content is protected !!