ವಿಷ ಸೇವಿಸಿ ವೃದ್ಧೆ ಸಾವು..!

0 2

ಹೊಸನಗರ : ವಿಷ ಸೇವಿಸಿ ವೃದ್ದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ತಾಲೂಕಿನ ತ್ರಿಣಿವೆ ವಾಸಿ ಶಿವಪ್ಪನಾಯ್ಕ ಎಂಬುವರ ಪತ್ನಿ ಬಂಗಾರಮ್ಮ (70) ಮೃತ ವೃದ್ದೆ. ಮಾನಸಿಕವಾಗಿ ಜರ್ಜರಿ ತಗೊಂಡಿದ್ದ ಈಕೆ ಆಗಾಗ್ಗೆ ಮನೆ ಬಿಟ್ಟು ಬೇರೆ ಊರುಗಳಿಗೆ ಹೋಗುತ್ತಿದ್ದು ಕುಟುಂಬ ವರ್ಗದವರೇ ಇವರ ವರ್ತನೆಗೆ ಅಸಹಾಯಕರಾಗಿದ್ದರು ಎಂದು ತಿಳಿದುಬಂದಿದೆ.

ಗುರುವಾರ ಮಧ್ಯಾಹ್ನ 3:30 ರ ಸಮಯದಲ್ಲಿ ಮನೆ ಉಪ್ಪರಿಗೆಯ ಮೇಲೆ ಒದ್ದಾಡುವ ಹಾಗೂ ಕೂಗಾಡುತ್ತಿರುವ ಶಬ್ದ ಕೇಳಿ ಮನೆಯವರು ಹೋಗಿ ನೋಡಿದಾಗ ಬಂಗಾರಮ್ಮ ಅವರ ಬಾಯಿಂದ ವಿಷದ ವಾಸನೆ ಬರುತ್ತಿದ್ದು ನನಗೆ ಜೀವನ ಸಾಕಾಗಿದೆ ಆದ ಕಾರಣ ಕ್ರಿಮಿನಾಶಕ ಸೇರಿಸಿದ್ದೇನೆ ಎಂದು ಹೇಳಿದ್ದು ತಕ್ಷಣ ಅವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ನೀಡಿದ ಚಿಕಿತ್ಸೆಯು ಫಲಕಾರಿ ಆಗದೆ ಇಂದು ಬಂಗಾರಮ್ಮ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪುತ್ರ ಕೃಷ್ಣ ಹೊಸನಗರ ಠಾಣೆಯಲ್ಲಿ ದೂರು ನೀಡಿದ್ದು ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave A Reply

Your email address will not be published.

error: Content is protected !!