ವೀರಶೈವ ಯುವ ಮುಖಂಡನ ಮೇಲೆ ಬೇಳೂರು ಬೆಂಬಲಿಗರಿಂದ ಹಲ್ಲೆಗೆ ಯತ್ನ ಆರೋಪ ; ದೂರು ದಾಖಲು

0 0

ಹೊಸನಗರ : ವೀರಶೈವ ಯುವ ಮುಖಂಡ ಪುಣಜೆ ಗ್ರಾಮದ ಚಿಕ್ಕಮಣತಿ ವಾಸಿ ಅಭಿಲಾಶ್ ಗೌಡ ಎಂಬುವವರ ಮೇಲೆ ಬೇಳೂರು ಬೆಂಬಲಿಗರಿಂದ ಹಲ್ಲೆಗೆ ಯತ್ನ ನಡೆಸಿರುವ ಆರೋಪದ ಬಗ್ಗೆ ಹೊಸನಗರ ಪೊಲೀಸ್ ಠಾಣೆಗೆ ದೂರಿನ ಅರ್ಜಿ ಸಲ್ಲಿಸಲಾಗಿದೆ.

ಏನಿದು ಪ್ರಕರಣ ? ದೂರಿನಲ್ಲೇನಿದೆ ?
ನಾನು ಏ.23 ರಂದು ಮದ್ಯರಾತ್ರಿ 12:10 ರ ಸುಮಾರಿಗೆ ನನ್ನ ಕೆಲಸ ಮುಗಿಸಿ ಮನೆಗೆ ಹೋಗುತ್ತಿರುವಾಗ ಹೊಸನಗರ ತಾಲ್ಲೂಕು ಪುಣಜೆ ಗ್ರಾಮದ ಸಾಗರ-ಹೊಸನಗರ ರಸ್ತೆಯ ಹೊಸಮನೆ ತಿರುವಿನಲ್ಲಿ ಹೋಗುತ್ತಿದ್ದಾಗ ಮೊದಲೇ ನಿಂತಿದ್ದ ಇನ್ನೋವಾ ಕಾರಿನಿಂದ ಕಾಂಗ್ರೆಸ್ ಪಕ್ಷದ ಮುಖಂಡ ಬೇಳೂರು ಗೋಪಾಲಕೃಷ್ಣರವರ ಆಪ್ತನಾಗಿರುವ ಸಣ್ಣಕ್ಕಿ ಮಂಜು @ ಮಂಜುನಾಥ ಬಿನ್ ದ್ಯಾವನಾಯ್ಕ ಇವರು ಕಾರಿನಿಂದ ಇಳಿದು ರಸ್ತೆಗೆ ಅಡ್ಡಬಂದು ಬೈಕಿನಲ್ಲಿ ಹೋಗುತ್ತಿದ್ದ ನನ್ನನ್ನು ನಿಲ್ಲಿಸಲು ಪ್ರಯತ್ನಿಸಿದ್ದು, ನನಗೆ ಅವಾಚ್ಯ ಶಬ್ದಗಳಿಂದ ಬೋ… ಮಗನೆ ನೀನು ನಮ್ಮ ಕಾಂಗ್ರೆಸ್ ಪಕ್ಷದ ವಿರುದ್ಧ ಚುನಾವಣಾ ಪ್ರಚಾರದ ಕೆಲಸವನ್ನು ಮಾಡುತ್ತೀಯಾ, ನೀನು ಲಿಂಗಾಯಿತರಾದರೆ ದೊಡ್ಡ, ಜನಾಂಗ ಎಂದು ಜಾತಿ ಹೆಸರು ಹೇಳಿ, ನನಗೆ ಬೆದರಿಕೆ ಹಾಕಿ, ನನ್ನ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದು. ನಾನು ಬೈಕನ್ನು ನಿಲ್ಲಿಸಿರುವುದಿಲ್ಲ. ಅವರುಗಳು ನನ್ನ ಬೈಕನ್ನು ಸುಮಾರು ದೂರದವರೆಗೂ ಕಾರಿನಲ್ಲಿ ಬೆನ್ನತ್ತಿ ಬಂದಿರುತ್ತಾರೆ. ನಾನು ಬೈಕ್‌ ನಿಲ್ಲಿಸದೆ ಮನೆಗೆ ಹೋಗಿರುತ್ತೇನೆ. ಅವರ ಕಾರಿನಲ್ಲಿ ಸುಮಾರು 7-8 ಜನರಿದ್ದು, ನನ್ನನ್ನು ಹಿಂಬಾಲಿಸಿ ನನ್ನ ಮೇಲೆ ಹಲ್ಲೆಗೆ ಯತ್ನಿಸಿರುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಸಿ.ಡಿ. ಇದ್ದು ಇದನ್ನು ಠಾಣೆಗೆ ಹಾಜರುಪಡಿಸಿದ್ದೇನೆ.

ಆದ್ದರಿಂದ ತಾವುಗಳು ಮೇಲ್ಕಂಡ ಆರೋಪಿ ಸಣ್ಣಕ್ಕಿ ಮಂಜು ಇವರನ್ನು ಠಾಣೆಗೆ ಕರೆಸಿ ಸೂಕ್ತ ವಿಚಾರಣೆ ನಡೆಸಿ, ನನಗೆ ಸೂಕ್ತ ರಕ್ಷಣೆಯನ್ನು ಕೊಡಿಸಿಕೊಡಬೇಕು ಎಂದು ಅಭಿಲಾಶ್ ಗೌಡ ಹೊಸನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಅರ್ಜಿಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!