ಶಾಂತವೇರಿ ಗೋಪಾಲಗೌಡರವರ ಹೋರಾಟದ ಫಲವಾಗಿ ಭೂ ಸುಧಾರಣೆ ; ಶಿವಾನಂದ ಕುಗ್ವೆ

0 0


ಹೊಸನಗರ: ಕಾಗೋಡು ಸತ್ಯಾಗ್ರಹ ನೇತೃತ್ವ ವಹಿಸಿದ ಶಾಂತವೇರಿ ಗೋಪಾಲಗೌಡ ಅವರ ಹೋರಾಟದ ಫಲವಾಗಿ ಉಳುವವನೆ ಹೊಲದೊಡೆಯ ಎಂಬ ಕಾನೂನಿಗೆ ನಾಂದಿ ಹಾಡಲಾಯಿತು. ಭೂ ಸುಧಾರಣೆ ಕಾಯ್ದೆಗೆ ಗೋಪಾಲಗೌಡ ಅವರ ಬಡವರ ಮೇಲಿನ ಕಾಳಜಿಯೇ ಸ್ಫೂರ್ತಿಯಾಯಿತು ಎಂದು ಶಾಂತವೇರಿ ಗೋಪಾಲಗೌಡ ಜನ್ಮಶತಮಾನೋತ್ಸವ ಸಂಚಾಲಕ ಶಿವಾನಂದ ಕುಗ್ವೆ ಹೇಳಿದರು.


ಶಾಂತವೇರಿ ಗೋಪಾಲಗೌಡ ಅವರ ಜನ್ಮಶತಮಾನೋತ್ಸವ ರಥಯಾತ್ರೆಯನ್ನು ಹೊಸನಗರದಲ್ಲಿ ಸ್ವಾಗತಿಸಿ ಅವರು ಮಾತನಾಡಿ, ಶಾಂತವೇರಿ ಗೋಪಾಲಗೌಡರ ಹೋರಾಟ ನೆಲೆಯಿಂದ ಇಲ್ಲಿನ ಸಮಾಜವಾದಿ ನೆಲ ಪಕ್ವವಾಯಿತು. ಅವರು ತನಗೆಂದು ಏನೂ ಯೋಚಿಸಲಿಲ್ಲ. ಬಡವರ ಪರವಾಗಿ ಚಿಂತಿಸಿದರು. ಅವರ ಆಶೋತ್ತರದಿಂದ ಭೂ ರಹಿತರಿಗೆ ಭೂಮಿ ಲಭಿಸಿತು. ಅವರ ಜನ್ಮಶತಮಾನೋತ್ಸವ ಆಚರಿಸುವುದು ಫಲಾನುಭವಿಗಳ ಹಕ್ಕಾಗಿದೆ ಎಂದರು.


ನಿವೃತ ಪ್ರಾಚಾರ‍್ಯ ಡಾ. ಸೊನಲೆ ಶ್ರೀನಿವಾಸ್ ಮಾತನಾಡಿ, ಶಾಂತವೇರಿ ಗೋಪಾಲಗೌಡರು ಹೊಸನಗರದ ಮೊದಲ ಶಾಸಕರು. ಈ ತಾಲ್ಲೂಕು ಸಮಾಜವಾದಿ ನೆಲವಾಗಿತ್ತು. ಅವರು ಗೇಣಿದಾರರ ಸಮಸ್ಯೆ, ರೈತ ವಿರೋಧಿ ನೀತಿಗಳ ಹೋರಾಟಗಳಿಗೆ ಜೀವ ತುಂಬಿದರು. ಶಾಂತವೇರಿ ಗೋಪಾಲಗೌಡ ಅವರ ರೈತ ನಿಲುವಿನ ಪ್ರೇರೇಪಣೆಯಿಂದಾಗಿ ಭೂ ಸುಧಾರಣೆ ಕಾಯ್ದೆ ಜಾರಿಯಾಯಿತು ಎಂದರು.


ಮಂಜುನಾಥ್ ಬ್ಯಾಣದ್, ವಸಂತಕುಮಾರ್, ವಾಸಪ್ಪ ಮಾಸ್ತಿಕಟ್ಟೆ, ತಲನೇರಿ ಶ್ರೀನಿವಾಸ್‌ಗೌಡ, ಬಿಜೆಪಿ ಉಮೇಶ್ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!