ಶಾಸಕ ಗೋಪಾಲಕೃಷ್ಣರವರಿಗೆ ರಿಪ್ಪನ್‌ಪೇಟೆ ವೀರಶೈವ ಸಮಾಜದವರಿಂದ ಅಭಿನಂದನೆ

0 1,090

ರಿಪ್ಪನ್‌ಪೇಟೆ: ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರುರವರನ್ನು ಇಂದು ರಿಪ್ಪನ್‌ಪೇಟೆ ಶ್ರೀಬಸವೇಶ್ವರ ವೀರಶೈವ ಸಮಾಜದವರು ಸಾಗರದ ಅವರ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಬಸವೇಶ್ವರ ವೀರಶೈವ ಸಮಾಜದ ಉಪಾಧ್ಯಕ್ಷ ಜಿ.ಎಂ.ದುಂಡರಾಜಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾಜಾಶಂಕರ ಇವರು ಈ ಹಿಂದಿನ ಸರ್ಕಾರದಿಂದ ರಿಪ್ಪನ್‌ಪೇಟೆಯ ಶಿವಮಂದಿರ ನಿರ್ಮಾಣ ಕಾಮಗಾರಿಗೆ 3 ಕೋಟಿ ರೂ. ಅನುದಾನವನ್ನು ನೀಡಲಾಗಿದ್ದು ಇನ್ನೂ ಸುಮಾರು ಒಂದು ಕೋಟಿಯ ಅನುದಾನದ ಕೊರತೆಯಿದ್ದು ಆರ್ಥಿಕವಾಗಿ ತುಂಬಾ ತೊಂದರೆಯಾಗಿರುವ ಕಾರಣ ಕಾಮಗಾರಿ ಇನ್ನೂ ಅಪೂರ್ಣವಾಗಿಯೇ ಉಳಿದಿದೆ ಆದ್ದರಿಂದ ಸರ್ಕಾರದಿಂದ ಇನ್ನೂ ಹೆಚ್ಚುವರಿ ಆರ್ಥಿಕ ನೆರವು ಕೊಡಿಸುವಂತೆ ಮನವಿ ಪತ್ರವನ್ನು ಶಾಸಕರಿಗೆ ಸಲ್ಲಿಸಿದರು.
ಸಮಾಜದವರ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಸರ್ಕಾರದಿಂದ ಅನುದಾನವನ್ನು ಕೊಡಿಸುವ ಬಗ್ಗೆ ಭರವಸೆ ನೀಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಗ್ರಾಮ ಪಂಚಾಯ್ತಿ ಸದಸ್ಯ ಡಿ.ಈ.ಮಧುಸೂದನ್,
ಸಮಾಜದ ಮುಖಂಡರಾದ ಹೆಚ್.ಎಂ.ವರ್ತೇಶ್‌ಗೌಡ, ಎಲ್.ವೈ.ದಾನೇಶಪ್ಪಗೌಡ, ಬೆಳಕೋಡು ಹಾಲಸ್ವಾಮಿಗೌಡ, ಜೆ.ಎಂ.ಶಾಂತಕುಮಾರ್‌ ಜಂಬಳ್ಳಿ, ಕೊಳವಳ್ಳಿ ಎಂ.ರಾಜೇಶ್, ಕಮದೂರು ಪರಮೇಶ್, ನೆವಟೂರು ಸ್ವಾಮಿಗೌಡರು, ಈಶ್ವರಪ್ಪ ಗವಟೂರು, ಜಿ.ಡಿ.ಮಲ್ಲಿಕಾರ್ಜುನ ಗವಟೂರು ಇನ್ನಿತರ ಶ್ರೀಬಸವೇಶ್ವರ ವೀರಶೈವ ಸಮಾಜ ಬಾಂಧವರು ಹಾಜರಿದ್ದರು.

Leave A Reply

Your email address will not be published.

error: Content is protected !!