ಶಾಸಕ ಹರತಾಳು ಹಾಲಪ್ಪನವರ ಹುಟ್ಟುಹಬ್ಬದ ಪ್ರಯುಕ್ತ ರಾಮಚಂದ್ರಪುರ ಮಠಕ್ಕೆ ಮೇವು ಸಮರ್ಪಣೆ

0 0


ಹೊಸನಗರ: ಹಿಂದುಗಳಿಗೆ ಗೋವು ಎಷ್ಟು ಶ್ರೇಷ್ಟವೂ ನಮ್ಮ ಕ್ಷೇತ್ರದ ಜನರಿಗೆ ಶಾಸಕ ಹರತಾಳು ಹಾಲಪ್ಪನವರು ಇತ್ತೀಚಿನ ದಿನಗಳಲ್ಲಿ ಅಷ್ಟೇ ಶ್ರೇಷ್ಟರಾಗಿದ್ದಾರೆ ಎಂದು ಶಾಸಕರ ಆಪ್ತ ಕಾರ್ಯದರ್ಶಿ ಮಂಡಾಣಿ ಮೋಹನ್ ಹೇಳಿದರು.

ರಾಮಚಂದ್ರಪುರ ಮಠಕ್ಕೆ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಗೋವುಗಳಿಗೆ ಮೇವು ವಿತರಿಸಿ ಮಾತನಾಡಿ,‌ನಮ್ಮ ಶಾಸಕರು ಅಭಿವೃದ್ಧಿ ಕೆಲಸದಲ್ಲಿ ಹೆಸರು ಪಡೆದಿದ್ದು ಮುಂದಿನ ದಿನದಲ್ಲಿಯೂ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲು ದೇವರು ಕರುಣಿಸಲಿ ಎಂದು ಗೋಪಾಲಕೃಷ್ಣ ಸ್ವಾಮಿಗೆ ಮತ್ತು ಸೀತಾರಾಮಚಂದ್ರ ದೇವರಿಗೆ ಪೂಜೆ ಸಲ್ಲಿಸಲಾಗಿದೆ. ನಮ್ಮ ಶಾಸಕರಿಗೆ ಆರೋಗ್ಯ ಭಾಗ್ಯ ದೇವರು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬಿಳಗೋಡು, ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷೆ ಸವಿತಾ ರಮೇಶ್, ಸದಸ್ಯ ಪ್ರವೀಣ್, ಮೋಹನ್, ಸೋಮಶೇಖರ ಹರಿದ್ರಾವತಿ, ಗಣೇಶ್, ಸುಂದರ್, ಗಣಪತಿ, ಬಸವರಾಜ್, ಹೆಚ್.ಎಸ್. ಮಂಜುನಾಥ್, ಹರೀಶ್, ಯೋಗೇಂದ್ರ, ಚಂದ್ರಶೇಖರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!