ಶಿಕ್ಷಕ ವೃತ್ತಿ ದೇವರು ಕೊಟ್ಟ ಕೊಡುಗೆ ; ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಕುಬೇರಪ್ಪ

0 0


ಹೊಸನಗರ: ಶಿಕ್ಷಕ ವೃತ್ತಿ ನಮಗೆ ದೇವರು ಕೊಟ್ಟ ಕೊಡುಗೆ ಎಂದು ಹೊಸನಗರ ತಾಲ್ಲೂಕು ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಕುಬೇರಪ್ಪನವರು ಹೇಳಿದರು.

ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾರುತಿಪುರ ಶಾಲೆಯ ಆವರಣದಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಪಡೆದ ಬಡ್ತಿ ಶಿಕ್ಷಕ ನರಸಿಂಹಮೂರ್ತಿಯವರನ್ನು ಮುಖ್ಯ ಶಿಕ್ಷಕರ ಸಂಘದಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಅವರು ಮಾತನಾಡಿದರು.


ದೇವರು ನಮ್ಮ ಜೀವನವನ್ನು ನಡೆಸಲು ಯಾವುದಾದರೂ ಕೆಲಸ ಮಾಡಲು ಈ ಭೂಮಿಗೆ ಕಳುಹಿಸಿದ್ದಾರೆ ಒಬ್ಬೊಬ್ಬರು ತಮ್ಮ ಜೀವನ ನಿರ್ವಹಣೆ ಮಾಡಲು ಒಂದೊಂದು ಕೆಲಸ ಹುಡುಕಿಕೊಂಡಿರುತ್ತಾರೆ. ಆ ಎಲ್ಲ ಕೆಲಸಗಳಲ್ಲಿ ಶಿಕ್ಷಕರ ಕೆಲಸ ಜಾಸ್ತಿಯಾದರೂ ಶಿಕ್ಷಕ ವೃತ್ತಿ ಮನಸ್ಸಿಗೆ ನೆಮ್ಮದಿ ತಂದಿರುತ್ತದೆ. ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವವರು ಈ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡುವುದರ ಜೊತೆಗೆ ವಿದ್ಯಾರ್ಥಿಗಳನ್ನು ಈ ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ರೂಪಿಸುವವರು ಈ ಶಿಕ್ಷಕರೆ ಎಂದರು.


ಈ ಸಮಾರಂಭದ ಅಧ್ಯಕ್ಷತೆಯನ್ನು ಕುಬೇರಪ್ಪ ವಹಿಸಿದ್ದರು. ಉಪಾಧ್ಯಕ್ಷೆ ಲಿಲ್ಲಿ ಡಿಸೋಜ, ಸುಶೀಲಮ್ಮ, ನಾಗೇಂದ್ರಪ್ಪ, ನಾರಾಯಣಪ್ಪ, ದೇವೇಂದ್ರಪ್ಪ, ಶಾರದಮ್ಮ, ಶಿಕ್ಷಣ ಇಲಾಖೆಯಿಂದ ಇ.ಸಿ.ಓ ಕರಿಬಸಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


ಚಿತ್ರ: ಹೊಸನಗರ ತಾಲ್ಲೂಕು ಮಾರುತಿಪುರ ಸಾಲೆಯ ಆವರಣದಲ್ಲಿ ಬಡ್ತಿ ಶಿಕ್ಷಕ ನರಸಿಂಹಮೂರ್ತಿಯವರು ವಯೋನಿವೃತ್ತಿ ಪಡೆದಿದ್ದು ಬಡ್ತಿ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸುತ್ತಿರುವುದು.
ಹೆಚ್.ಎಸ್.ನಾಗರಾಜ್

Leave A Reply

Your email address will not be published.

error: Content is protected !!