ಶೈಕ್ಷಣಿಕ ವೃತ್ತಿಯನ್ನು ಸಮಾಜವು ಗೌರವಿಸುತ್ತದೆ ; ಬಿ. ಕೃಷ್ಣಪ್ಪ

0 0


ಹೊಸನಗರ : ಶೈಕ್ಷಣಿಕ. ವೃತ್ತಿಯು ಪವಿತ್ರವಾಗಿದ್ದು ನಾವುಗಳು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯಗಳನ್ನು ಮಾಡಿದರೆ ಇದನ್ನು ಸಮಾಜವು ಗೌರವಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಬಿ. ಕೃಷ್ಣಪ್ಪ ಹೇಳಿದರು.

ತಾಲೂಕಿನ ಪದವಿಪೂರ್ವ ಉಪನ್ಯಾಸಕರ ಸಂಘದ ವತಿಯಿಂದ ನಿಟ್ಟೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಕಾಲೇಜಿನ ಉಪನ್ಯಾಸಕರ ಹಾಗೂ ಸಿಬ್ಬಂದಿಗಳ ಶೈಕ್ಷಣಿಕ ಕಾರ್ಯಕ್ರಮದ ಕಾರ್ಯಕ್ರಮವನ್ನು
ಉದ್ಘಾಟಿಸಿ ಮಾತನಾಡಿ, ಉಪ ನಿರ್ದೇಶಕ ಕಛೇರಿ ಜನಸ್ನೇಹಿ-ಉಪನ್ಯಾಸಕ ಸ್ನೇಹಿಯಾಗಿದ್ದು ಇದರ ಸದ್ಭಳಕೆ ಮಾಡಿಕೊಳ್ಳುವುದರೊಂದಿಗೆ, ಕಾಲೇಜು-ಫಲಿತಾಂಶ ಪ್ರಗತಿಯಲ್ಲಿ ಎಲ್ಲರೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇಲಾಖೆಯಲ್ಲಿನ ಇತ್ತೀಚಿನ ಬದಲಾವಣೆಗಳು, ಫಲಿತಾಂಶ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಉಪನ್ಯಾಸಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

ಉಪನಿರ್ದೇಶಕರ ಕಛೇರಿಯ ಶಾಖಾಧಿಕಾರಿಗಳಾದ ಪ್ರಸನ್ನ ಮಾತನಾಡಿ, ಇಲಾಖೆಯಿಂದ ಸೌಲಭ್ಯಗಳನ್ನು ಪಡೆಯುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.

ಅಮೃತ ಸರಕಾರಿ ಪದವಿಪೂರ್ವ ಕಾಲೇಜ್ ನ ಉಪನ್ಯಾಸಕ ನಾಗೇಶ್ ಸೋಮಯಾಜಿ ಜಿ.ಎಸ್. ಇಲಾಖೆ ತಂತ್ರಾಂಶದ ಉಪನ್ಯಾಸ ನೀಡಿದರು.

ನಂತರ ನಡೆದ “ಅಭಿನಂದನಾ” ಕಾರ್ಯಕ್ರಮದಲ್ಲಿ 60 ರ ಸಂಭ್ರಮವನ್ನು ಆಚರಿಸುತ್ತಿರುವ ಮತ್ತು 2023 ರಲ್ಲಿ ನಿವೃತ್ತಿಯಾಗುತ್ತಿರುವ ಪ್ರಾಚಾರ್ಯರು/ಉಪನ್ಯಾಸಕರು/ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯೆ ಸಾಕಮ್ಮ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ನಿಟ್ಟೂರಿನ ಪ್ರಭಾರಿ ಪ್ರಾಚಾರ್ಯ ವೆಂಕಟೇಶ್ ಇವರನ್ನು ಸನ್ಮಾನಿಸಲಾಯಿತು.

ತಾಲ್ಲೂಕಿನ ಉಪನ್ಯಾಸಕರು ತಮ್ಮ ವಿಷಯದಲ್ಲಿ 100% ಫಲಿತಾಂಶ ನೀಡಿದ 25 ಉಪನ್ಯಾಸಕರಿಗೆ “ಶ್ಲಾಘನಾ ಸ್ಮರಣಿಕೆ’ ನೀಡಿ ಗೌರವಿಸಲಾಯಿತು.

ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಯೋಗೀಶ್ ರವರು ಇಂದಿನ ಉಪನ್ಯಾಸಕರ ಸಮಸ್ಯೆಗಳು, ಅವುಗಳ ಪರಿಹಾರಕ್ಕೆ ಸಂಘ ಇಡುತ್ತಿರುವ ಹೆಜ್ಜೆಗಳ ಬಗ್ಗೆ ಮತ್ತು ಸಂಘಟನೆ ಶೈಕ್ಷಣಿಕ ಪ್ರಗತಿಯಲ್ಲಿ ಹೇಗೆ ತಮ್ಮನ್ನು ತೊಡಗಿಸಿಕೊಳ್ಳುತ್ತವೆ ಎಂಬುದನ್ನು ವಿವರಿಸಿದರು.


ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಪ್ಪ ಗುಂಡಪಲ್ಲಿ ಯವರು ಮಾತನಾಡಿ, ಹೊಸನಗರ ತಾಲ್ಲೂಕಿನ ಸಂಘಟನೆ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸುವುದರೊಂದಿಗೆ ಶೈಕ್ಷಣಿಕ ಏಳಿಗೆಗೆ ಪ್ರಾಚಾರ್ಯರ ಸಂಘ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಹೊಸನಗರ ತಾಲ್ಲೂಕಿನ ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಹಾಲಪ್ಪ ಸಂಕೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಿಪ್ಪನ್‌ಪೇಟೆ ಸರಕಾರಿ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಖಜಾಂಚಿ ರಾಜೇಶ್ ಬೋಳಾರ್ ಬೇಡಿಕೆ ಪಟ್ಟಿ ಸಲ್ಲಿಸಿದರು. ವೇದಿಕೆಯಲ್ಲಿ ಪ್ರಾಚಾರ್ಯರಾದ ಮಹಮದ್ ನಜಹತ್, ಗೀತಾ ಹಾಗೂ ಜಿಲ್ಲಾ ಸಂಘದ ಮಲ್ಲಿಕಾರ್ಜುನ ಸ್ವಾಮಿ, ದಿನಕರ್, ಘನಶ್ಯಾಮ್, ಕುಬೇರ ನಾಯ್ಕ, ತಾಲ್ಲೂಕು ಸಂಘದ ಕಾರ್ಯಾಧ್ಯಕ್ಷ ಗಣೇಶ್, ಗೌರವಾಧ್ಯಕ್ಷ ದಾಮೋದರ ಶೆಣೈ, ನಿಕಟಪೂರ್ವ ಅಧ್ಯಕ್ಷ ಗಣೇಶ್ ಐತಳ್ ಇನ್ನಿತರರು ಇದ್ದರು.


ಕು.ಸೀಮಾ ಪ್ರಾರ್ಥಿಸಿ, ಸಂತೋಷ್ ಸ್ವಾಗತಿಸಿ, ಸ್ವಾಮಿರಾವ್ ವಂದಿಸಿದರು. ಕಾರ್ಯದರ್ಶಿ ಫ್ರಾನ್ಸಿಸ್ ನಿರೂಪಿಸಿದರು.

Leave A Reply

Your email address will not be published.

error: Content is protected !!