ಸಂತೃಪ್ತಿ ಬದುಕಿಗೆ ಧರ್ಮ ಧಾರ್ಮಿಕ ಕಾರ್ಯಗಳು ಪೂರಕ

0 400

ರಿಪ್ಪನ್‌ಪೇಟೆ: ಅಗೋಚರ ಶಕ್ತಿಯೇ ದೇವರು. ಸರ್ವ ಧರ್ಮದ ಸಾರವೂ ಒಂದೇ ಆಗಿದ್ದು ಏಕಾಗ್ರತೆಯಿಂದ ಭಗವಂತನಲ್ಲಿ ಪ್ರಾರ್ಥಿಸಿದಲ್ಲಿ ಪುಣ್ಯ ಪ್ರಾಪ್ತಿಯೊಂದಿಗೆ ಸಂತೃಪ್ತಿ ದೊರೆಯುವುದೆಂದು ಶಿವಮೊಗ್ಗ (Shivamogga) ಹೆರೆಗೊಡಿಗೆ ನಿವೃತ್ತ ಪ್ರೋ.ಹೆಚ್.ವಿ.ರಾಮಪ್ಪಗೌಡ ಹೇಳಿದರು.

ರಿಪ್ಪನ್‌ಪೇಟೆಯ (Ripponpet) ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾದ ಹೊಸನಗರದ ಶ್ರೀಕ್ಷೇತ್ರ ಧರ್ಮಸ್ಥಳ (Dharmasthala) ಗ್ರಾಮಾಭಿವೃದ್ದಿ ಯೋಜನೆ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ರಿಪ್ಪನ್‌ಪೇಟೆ ವಲಯ, ಗ್ರಾಮ ಪಂಚಾಯ್ತಿ ರಿಪ್ಪನ್‌ಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಸುಭಿಕ್ಷೆಗಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ 458ನೇ ನಮ್ಮೂರ ನಮ್ಮ ಕೆರೆ ಹಸ್ತಾಂತರ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಜನರ ನೆಮ್ಮದಿಯಿಂದ ಬದುಕುವುದೇ ಕಷ್ಟಕರವಾಗಿದೆ. ಕುಟುಂಬ ಸಮಾಜದ ಉದ್ದಾರಕ್ಕಾಗಿ ದೇವರು ಧಾರ್ಮಿಕ ಆಚರಣೆಗಳಿಂದಾಗಿ ನೆಮ್ಮದಿಯನ್ನು ಕಾಣವಂತಾಗಿದೆ.

ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಶೋಷಣೆ ಅನಾಚಾರದಂತಹ ಘಟನೆಗಳಿಂದಾಗಿ ಜನರು ನೆಮ್ಮದಿಯಿಂದ ಬದುಕು ಸಾಗಿಸುವುದು ಸಹ ಕಷ್ಟಕರವಾಗಿದೆ. ಸಮಾಜ ಘಾತುಕ ಶಕ್ತಿಗಳ ದಮನಕ್ಕೆ ಎಲ್ಲರೂ ಸಹಕರಿಸಬೇಕು. ಮಠ ಮಂದಿರಗಳು ಭಯ ಭಕ್ತಿಯ ಕೇಂದ್ರಗಳಾದಾಗ ಮಾತ್ರ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಆ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಮಾಜ ಮುಖಿ ಚಿಂತನೆಗಳು ಮತ್ತು ಅನ್ನದಾಸೋಹದಂತಹ ಕಾರ್ಯದಿಂದಾಗಿ ಕ್ಷೇತ್ರದ ಗೌರವ ಹೆಚ್ಚಾಗುವುದರೊಂದಿಗೆ ಸಮಾಜ ಕಟ್ಟುವುದರಿಂದಾಗಿ ದೇಶ ಸಂವೃದ್ಧಿಯಿಂದಿರಲು ಸಾಧ್ಯವಾಗಿದೆ. ಗ್ರಾಮದಲ್ಲಿನ ಕೆರೆಗಳು ಹೂಳು ತುಂಬಿಕೊಂಡು ಪರಿಣಾಮ ಆಂತರ್ಜಲ ಸಹ ಕುಸಿಯುವಂತಾಗಿದ್ದು ನಮ್ಮೂರು ನಮ್ಮ ಕೆರೆ ಯೋಜನೆಯಿಂದಾಗಿ ಪೂಜ್ಯ ಹೆಗ್ಗಡೆಯವರ ಮಹಾತ್ವಾಕಾಂಕ್ಷಿ ಯೋಜನೆಯ ಫಲದಿಂದಾಗಿ ಕೆರೆಗಳ ಹೂಳು ತಗೆದು ಅಂತರ್ಜಲ ವೃದ್ದಿಯಾಗಿರುವುದನ್ನು ರಸ್ತೆಯಲ್ಲಿ ಸಂಚರಿಸುವವರಿಗೆ ಪರಿಶುದ್ದ ಗಾಳಿ ಸ್ವಚ್ಚ ಪರಿಸರ ದೊರೆಯುವಂತಾಗಿದೆ ಎಂದರು.

ಶಿವಮೊಗ್ಗ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಹಿರಿಯ ನಿರ್ದೇಶಕ ಜಿ.ಚಂದ್ರಶೇಖರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಮಗ್ರ ಮಾಹಿತಿಯನ್ನು ವಿವರಿಸಿದರು.
ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಆಧ್ಯಕ್ಷ ನಾಗರಾಜಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಈಶ್ವರಶೆಟ್ಟಿ, ಗ್ರಾ.ಪಂ.ಸದಸ್ಯರ ನಿರೂಪ್‌ಕುಮಾರ್, ಆಸಿಫ್, ಪ್ರಕಾಶ ಪಾಲೇಕರ್, ಅಶ್ವನಿ ರವಿಶಂಕರ್, ಗಣಪತಿ, ಜಿಲ್ಲಾ ಜಾಗೃತಿ ವೇದಿಕೆ ಅಧ್ಯಕ್ಷೆ ನಾಗರತ್ನ ದೇವರಾಜ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಭಿಯಂತರ ಗಣಪತಿ ಉಪಸ್ಥಿತರಿದ್ದು ಮಾತನಾಡಿದರು.

ಪಂಚಮಿ ಪ್ರಾರ್ಥಿಸಿದರು. ಹೊಸನಗರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಬೇಬಿ ಸ್ವಾಗತಿಸಿದರು. ಮೇಲ್ವಿಚಾರಕಿ ಪೂರ್ಣಿಮಾ ಸಾಧನಾ ವರದಿ ವಾಚನ ಮಾಡಿದರು.

Leave A Reply

Your email address will not be published.

error: Content is protected !!