ಸಂಪೆಕಟ್ಟೆಯಲ್ಲಿ ವನ ಮಹೋತ್ಸವ ಆಚರಣೆ

0 0


ಹೊಸನಗರ: ಇದೇ ಜುಲೈ 1ರಿಂದ 7ರವರೆಗೂ ರಾಜ್ಯ ವ್ಯಾಪ್ತಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ವನ ಮಹೋತ್ಸವ ಆಚರಣೆಗೆ ಸರ್ಕಾರ ಆದೇಶ ನೀಡಿದ ಹಿನ್ನಲೆಯಲ್ಲಿ ಸಾಗರ ಅರಣ್ಯ ವಿಭಾಗಕ್ಕೆ ಸೇರಿದ ಹೊಸನಗರ ಉಪ ವಿಭಾಗದ ನಗರ ವಲಯ ಅರಣ್ಯ, ಸಂಪೆಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮೊದಲ ದಿನದ ವನ ಮಹೋತ್ಸವ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಂಡಿತ್ತು.


ವಿದ್ಯಾರ್ಥಿಗಳಿಗೆ ಪರಿಸರ, ಅರಣ್ಯ ಸಂಪತ್ತು, ವನ್ಯಜೀವಿಗಳ ಜೀವನ ಚಕ್ರ ಕುರಿತು ಸಮಗ್ರ ಮಾಹಿತಿಗಳ ಜೊತೆಯಲ್ಲಿ ವಿವಿಧ ಮಾದರಿಯ ಸಸಿಗಳನ್ನು ನೆಟ್ಟು ಬೆಳೆಸಿ ಉಳಿಸುವ ಮೂಲಕ ಅರಣ್ಯ ಸಂರಕ್ಷಣೆಗೆ ಮುಂದಾಗುವಂತೆ ಜಾಗೃತಿ ಮೂಡಿಸುವ ಸಂದೇಶವನ್ನು ಇಲಾಖೆ ಸಿಬ್ಬಂದಿಗಳು ನೀಡಿದರು.

ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರ ಸಹಿತ ವಿವಿಧ ಸಿಬ್ಭಂದಿಗಳು, ಅರಣ್ಯ ಇಲಾಖೆಯ ನಗರ ವಲಯ ಅರಣ್ಯಧಿಕಾರಿ ಸಂಜಯ್, ಸಂಪೆಕಟ್ಟೆ ಶಾಖೆ ಉಪ ವಲಯ ಅರಣ್ಯಾಧಿಕಾರಿ ಎಸ್. ಕೆ. ಸತೀಶ್‌ನಾಯ್ಕ್, ವನಪಾಲಕ ಬಾಲರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!