ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕರಿಗೆ ಬೀಳ್ಕೊಡುಗೆ

0 190

ರಿಪ್ಪನ್‌ಪೇಟೆ: ಇಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕಳೆದ 18 ವರ್ಷದಿಂದ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಮುಖ್ಯಶಿಕ್ಷಕಿ ಲಕ್ಷ್ಮಿದೇವಿ ಮತ್ತು ಸಹ ಶಿಕ್ಷಕಿ ಜುಲೇಕಾಭಿ ಇವರಿಗೆ ಶಾಲಾ ಎಸ್.ಡಿ.ಎಂ.ಸಿ ಸಮಿತಿಯವರು ಮತ್ತು ಶಿಕ್ಷಕ ವೃಂದ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದರು.


ಸಮಾರಂಭದ ಆಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಆಧ್ಯಕ್ಷ ಮೊಹಮ್ಮದ್ ವಹಿಸಿದ್ದರು.
ಮುಖ್ಯ ಆತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗರಾಜ್, ಕಛೇರಿಯ ಸಿಬ್ಬಂದಿ ಕರಿಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ನಿರ್ದೇಶಕ ಜಗದೀಶ ಕಾಗಿನಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಉಮೇಶ್, ಮಹ್ಮದ್‌ಅಲಿ, ಅಸ್ಮಭಾನು, ಇನ್ನಿತರರು ಭಾಗವಹಿಸಿ ಮಾತನಾಡಿದರು.


ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡಿರುವ ಶಾಲಾ ಮುಖ್ಯೋಪಾಧ್ಯಾಯನಿ ಲಕ್ಷ್ಮಿದೇವಿ ಹಾಗೂ ಜುಲೇಕಾಭಿ ಇವರನ್ನು ಶಾಲಾ ಸಮತಿಯವರು ಸನ್ಮಾನಿಸಿ ಆಭಿನಂದಿಸಿದರು.
ಮುಖ್ಯ ಶಿಕ್ಷಕಿ ಲೀಲಾವತಿ ಸ್ವಾಗತಿಸಿ ನಿರೂಪಿಸಿದರು. ಸಾಜಿದಬೇಗಂ ವಂದಿಸಿದರು.

Leave A Reply

Your email address will not be published.

error: Content is protected !!