ಸಿದ್ದರಾಮಯ್ಯನವರ ‘ವೀರಶೈವ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಠರು’ ಎಂಬ ಹೇಳಿಕೆಗೆ ಖಂಡನೆ

0 2


ಹೊಸನಗರ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹೇಳಿಕೆಯಲ್ಲಿ ವೀರಶೈವ ಲಿಂಗಾಯತ ಮುಖ್ಯಮಂತ್ರಿಗಳೆಲ್ಲರೂ ಎಂಬ ಹೇಳಿಕೆಗೆ ಹೊಸನಗರ ವೀರಶೈವ ಪರಿಷತ್ ಖಂಡಿಸುವುದರ ಜೊತೆಗೆ ತಕ್ಷಣ ಹಿಂಪಡೆಯಬೇಕು ಹಾಗೂ ಲಿಂಗಾಯತ ಸಮುದಾಯದವರಿಗೆ ಕ್ಷಮಾಪಣೆ ಕೇಳಬೇಕು ಇಲ್ಲವಾದರೆ ಕರ್ನಾಟಕ ರಾಜ್ಯದ್ಯಾಂತ ಉಗ್ರ ಹೋರಾಟ ನಡೆಸುವುದಾಗಿ ವೀರಶೈವ ಪರಿಷತ್ ಸದಸ್ಯ ತಾಲ್ಲೂಕ್ ಪಂಚಾಯತಿ ಮಾಜಿ ಅಧ್ಯಕ್ಷ ಆಲುವಳ್ಳಿ ವೀರೇಶ್‌ರವರು ಆಗ್ರಹಿಸಿದ್ದಾರೆ.


ಹೊಸನಗರದ ಗಣಪತಿ ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯ ಈ ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಿ ಆಡಳಿತ ನಡೆಸುವುದರ ಜೊತೆಗೆ ರಾಜ್ಯಕ್ಕೆ ಉತ್ತಮ ಕೊಡಿಗೆ ನೀಡಿದ್ದಾರೆ ಆದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರ ಬಾಯಿಯಲ್ಲಿ ಒಂದು ಸಮಾಜವನ್ನು ಗುರಿಯಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವುದಿಲ್ಲ. ಅವರು ತಕ್ಷಣ ಕ್ಷಮಾಪಣೆ ಕೇಳಿದರೆ ಒಳ್ಳೆಯ ಬೆಳವಣಿಗೆಯಾಗುತ್ತದೆ ಇಲ್ಲವಾದರೆ ಕರ್ನಾಟಕ ರಾಜ್ಯಾದ್ಯಂತ ಉಗ್ರ ಹೋರಾಟದ ಜೊತೆಗೆ ಈ ಬಾರಿಯ ಚುನಾವಣೆಯಲ್ಲಿ ಸಿದ್ಧರಾಮಯ್ಯನವರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.


ಮಾಮ್‌ಕೋಸ್ ನಿರ್ದೆಶಕ ಕಲ್ಯಾಣಪ್ಪ ಗೌಡ ಮಾತನಾಡಿ, ಕರ್ನಾಟಕ ರಾಜ್ಯಕ್ಕೆ ವೀರಶೈವ ಲಿಂಗಾಯಿತರ ಕೊಡುಗೆ ಅಪಾರವಾಗಿದೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ನಿಜಲಿಂಗಪ್ಪ, ವೀರೇಂದ್ರ ಪಾಟೇಲ್, ಜೆ.ಎಚ್ ಪಾಟೇಲ್‌ರವರ ಆಳ್ವಿಕೆ ಬಡವರ ದಲಿತರ ಬಾಳಿನ ಆಶಾ ಕಿರಣವಾಗಿ ಆಳ್ವಿಕೆ ನಡೆಸಿದವರು ಇಂಥವರಿಗೆ ಸಿದ್ದರಾಮಯ್ಯನವರು ಭ್ರಷ್ಟರು ಎಂಬ ಪದ ಬಳಸಿದ್ದು ಸರಿಯಲ್ಲ. ಸಮಾಜದಲ್ಲಿ ಎಲ್ಲ ಜಾತಿ ಜನಾಂಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರ ಮೇಲಿದೆ ಮುಂದೆ ಯಾವುದೇ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಹೇಳಿಕೆ ನೀಡುವುದು ಸೂಕ್ತ ಎಂದರು.


ಹೊಸನಗರ ತಾಲ್ಲೂಕು ವೀರಶೈವ ಪರಿಷತ್ ಅಧ್ಯಕ್ಷ ಮೆಣಸೆ ಆನಂದ್‌ರವರು ಮಾತನಾಡಿ, ಚುನಾವಣೆಯಲ್ಲಿ ಪರ ವಿರೋಧ ಮಾತನಾಡುವುದು ಸಹಜ ಆದರೆ ಚುನಾವಣೆಯನ್ನು ದ್ವೇಷದಿಂದ ಚುನಾವಣೆ ನಡೆಸುವುದು ಸೂಕ್ತವಲ್ಲ ಹಾಗೂ ಜಾತಿ ನಿಂದನೆ ಮಾಡುವುದು ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿದರೆ ಕರ್ನಾಟಕ ರಾಜ್ಯ ಬಿಹಾರವಾಗುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದರು.


ವೀರಶೈವ ಮುಖಂಡನ ಮೇಲೆ ಹಲ್ಲೆ ಯತ್ನ ಖಂಡನೆ
ವೀರಶೈವ ಮುಖಂಡ ಹಾಗೂ ಬಿಜೆಪಿಯ ಕಾರ್ಯಕರ್ತ ಅಭಿಲಾಷ್ ಮೇಲೆ ಏಪ್ರಿಲ್ 23ರ ರಾತ್ರಿ ಬೇಳೂರು ಅಭಿಮಾನಿಗಳು ಹೊಸನಗರ ತಾಲ್ಲೂಕು ಹೊಸಮನೆ ಕ್ರಾಸ್ ಬಳಿ ಹಲ್ಲೆಗೆ ಯತ್ನ ನಡೆಸಿದ್ದಾರೆ‌‌. ಅಭಿಲಾಷ್‌ರವರು ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ವೀರಶೈವ ಮುಖಂಡ ಅಭಿಲಾಷ್ ಮೇಲೆ ಹಲ್ಲೆಯನ್ನು ಈ ಸಂದರ್ಭದಲ್ಲಿ ಖಂಡಿಸುವುದರ ಜೊತೆಗೆ ಹಲ್ಲೆ ನಡೆಸಿರುವವರಿಗೆ ಬೇಳೂರು ಗೋಪಾಲಕೃಷ್ಣರವರು ಬುದ್ಧಿ ಹೇಳಬೇಕಾಗಿದೆ. ಇಲ್ಲವಾದರೆ ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣರವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಚುನಾವಣೆ ನಡೆಯುವ ಮುಂಚಿತವಾಗಿ ದಬ್ಬಾಳಿಕೆ ನಡೆಸಿದರೆ ಚುನಾವಣೆಯಲ್ಲಿ ಗೆದ್ದ ಮೇಲೆ ಜನರನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದು ಇವರ ದಬ್ಬಾಳಿಕೆಯನ್ನು ವೀರಶೈವ ಸಮಾಜ ಎಂದು ಸಹಿಸುವುದಿಲ್ಲ ಮುಂದೆ ಇಂಥಹ ಪ್ರಕರಣ ನಡೆದರೆ ತಕ್ಕ ಉತ್ತರವನ್ನು ನೀಡಲು ವೀರಶೈವ ಸಮಾಜ ಸಿದ್ಧವಿದೆ ಎಂದು ಅಭಿಲಾಷ್‌ರವರು ಹೇಳಿದರು.


ಈ ಪತ್ರಿಕಾಘೋಷ್ಠಿಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆಲವಳ್ಳಿ ವೀರೇಶ್, ಮಾಮ್ಕೋಸ್ ನಿರ್ದೇಶಕ ಕಲ್ಯಾಣಪ್ಪ ಗೌಡ, ವೀರಶೈವ ಪರಿಷತ್ ಅಧ್ಯಕ್ಷ ಮೆಣಸೆ ಆನಂದ್, ಬಿಜೆಪಿ ಮುಖಂಡ ಅಭಿಲಾಶ್ ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್, ಪ್ರವೀಣ್, ಮಹೇಶ್, ಸುನೀಲ್ ಪಟೋಡಿ, ದಯಾಕರ್ ಗೌಡ, ಲೋಕೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!