ಸೊಸೈಟಿಯವರ ನಿರ್ಲಕ್ಷ್ಯ ; ಗೊಬ್ಬರದ ಚೀಲಗಳು ಮೈ ಮೇಲೆ ಉರುಳಿ ಬಿದ್ದು ರೈತನ ಮೂಳೆ ಮುರಿತ !
ಹೊಸನಗರ : ಸೊಸೈಟಿಗೆ ಗೊಬ್ಬರ ಖರೀದಿಸಲು ಹೋದ ರೈತನ ಮೇಲೆ ಗೊಬ್ಬರದ ಚೀಲಗಳು ಉರುಳಿ ಬಿದ್ದು ತೀವ್ರ ಗಾಯಗೊಂಡ ಘಟನೆ ವರದಿಯಾಗಿದೆ.

ಮಾರುತಿಪುರ ಗ್ರಾ.ಪಂ ವ್ಯಾಪ್ತಿಯ ವಿಜಾಪುರದ ಕಾಪಿ ಅಣ್ಣಪ್ಪ (55) ಗಂಭೀರ ಗಾಯಗೊಂಡ ವ್ಯಕ್ತಿ. ಇವರು ಶುಕ್ರವಾರ ಕಳೂರು ಶ್ರೀ ರಾಮೇಶ್ವರ ಪತ್ತಿನ ಸಹಕಾರ ಸಂಘದ ಮಾರುತಿಪುರ ಶಾಖೆಗೆ ಗೊಬ್ಬರ ಖರೀದಿಸಲು ತೆರಳಿದಾಗ ದಾಸ್ತಾನು ಮಾಡಿದ್ದ ಬರೋಬ್ಬರಿ 08 ಗೊಬ್ಬರದ ಚೀಲಗಳು ಏಕಾಏಕಿ ಇವರ ಮೈ ಮೇಲೆ ಉರುಳಿದ ಪರಿಣಾಮ ಕೈ ಮತ್ತು ಕಾಲಿನ ಮೂಳೆಗಳು ಮುರಿದಿದ್ದು ಗಂಭೀರ ಗಾಯಗೊಂಡ ಇವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ (ಆರೈಕೆ ಆಸ್ಪತ್ರೆ) ದಾಖಲು ಮಾಡಲಾಗಿದೆ.

ಕಡು ಬಡ ರೈತನಾಗಿರುವ ಅಣ್ಣಪ್ಪ ಮನೆಗೆ ಈತನೇ ಆಧಾರವಾಗಿದ್ದ ಈ ಘಟನೆಯಿಂದ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ.
ನಿರ್ಲಕ್ಷ್ಯ ಆರೋಪ :
ಅಣ್ಣಪ್ಪ ನವರು ಗಂಭೀರ ಗಾಯಗೊಂಡರು ಸೊಸೈಟಿಯ ಆಡಳಿತ ಮಂಡಳಿ ಆಗಲಿ, ಸಿಬ್ಬಂದಿಗಳಾಗಲಿ ಗಾಯಾಳುವನ್ನು ಉಪಚರಿಸದೆ ಬೇಜವಾಬ್ದಾರಿ ತನ ಮೆರೆದಿದ್ದಾರೆ ಎಂದು ಗಾಯಾಳುವಿನ ಕುಟುಂಬಸ್ಥರು ಸೊಸೈಟಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.