ಸ್ವಂತ ಖರ್ಚಿನಲ್ಲಿ ರಸ್ತೆ ರಿಪೇರಿ ಮಾಡಿದ ಗ್ರಾಮಸ್ಥರು

0 1


ಹೊಸನಗರ: ತಾಲ್ಲೂಕಿನ ಹುಂಚಾ ಹೋಬಳಿ ಮತ್ತು ಕಸಬಾ ಹೋಬಳಿಗೆ ಸೇರುವ ಆದುವಳ್ಳಿ ಗ್ರಾಮದ ಗ್ರಾಮಸ್ಥರು ಸೇರಿ ತಮಗೆ ಓಡಾಡುವುದಕ್ಕೆ ಅನುಕೂಲಕ್ಕಾಗಿ ತಮ್ಮ ಸ್ವಂತ ದುಡಿಮೆಯ ಹಣವನ್ನು ಉಪಯೋಗಿಸಿಕೊಂಡು ರಸ್ತೆ ನಿರ್ಮಿಸಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಬರುವುದಕ್ಕಿಂತ ಮುಂಚೆ ನಮಗೆ ರಸ್ತೆಯಿಲ್ಲ ಸರ್ಕಾರಿ ಸೌಲಭ್ಯದಿಂದ ವಂಚಿತವಾದ ಗ್ರಾಮ ಎಂದು ವಿಧಾನಸಭಾ ಚುನಾವಣೆ ಬಹಿಷ್ಕಾರ ಮಾಡಲು ಹೊರಟ್ಟಿದ್ದರು ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಅಧಿಕಾರಿಗಳ ವರ್ಗ ವಿಧಾನಸಭೆ ಚುನಾವಣೆ ಮುಗಿದ ತಕ್ಷಣ ನಿಮ್ಮ ಗ್ರಾಮಕ್ಕೆ ಸಕಲ ಸೌಲಭ್ಯ ನೀಡುವುದಾಗಿ ಹೇಳಿಹೋದ ಅಧಿಕಾರಿ ವರ್ಗದವರಾಗಲಿ ಜನ ಪ್ರತಿನಿಧಿಯಾಗಲಿ ನಮ್ಮ ಗ್ರಾಮದತ್ತಾ ಸುಳಿಯಲಿಲ್ಲ ಚುನಾವಣೆ ಮುಗಿದಿದೆ ಮಲೆಗಾಲ ಹತ್ತಿರ ಬರುತ್ತಿದ್ದೆ ರಸ್ತೆಯಲ್ಲಿ ಓಡಾಟ ನಡೆಸುವುದು ಹೇಗೆ ಎಂಬ ಚಿಂತೆಯಲ್ಲಿರುವಾಗ ಊರಿನ ಪ್ರಮುಖರೆಲ್ಲ ಸೇರಿ ನಾವೇ ರಸ್ತೆ ನಿರ್ಮಿಸೋಣ ಎಷ್ಟು ಖರ್ಚಾದರೂ ನಾವೇ ಹಾಕಿಕೊಳ್ಳೊಣ ಎಂದು ತಿರ್ಮಾನಿಸಿ ರಸ್ತೆ ನಿರ್ಮಿಸಿಕೊಂಡಿದ್ದಾರೆ.

ದೇಣಿಗೆ:
ಆದುವಳ್ಳಿ ಗ್ರಾಮದ ಜನರು ತಮ್ಮ ಸ್ವಂತ ಹಣ ಅಂದಾಜು 50 ಸಾವಿರ ರೂಪಾಯಿ ವೆಚ್ಚ ಮಾಡಿ ರಸ್ತೆ ನಿರ್ಮಿತ್ತಿರುವಾಗ ಸೊನಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ರಹ್ಮಣ್ಯ ಸ್ವಾಮಿರಾವ್‌ರವರು ಗ್ರಾಮ ಪಂಚಾಯತಿಯಿಂದ 5 ಸಾವಿರ ಹಣ ನೀಡಿದ್ದು ಕೊಳಗಿ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್‌ರವರು ತಮ್ಮ ಸ್ವಂತ ಹಣ 2500 ರೂಪಾಯಿ ರಸ್ತೆ ಖರ್ಚಿಗಾಗಿ ನೀಡಿದ್ದು ಇವರಿಬ್ಬರಿಗೂ ಆದುವಳ್ಳಿ ಗ್ರಾಮಸ್ಥರು ಅಭಿನಂದಿಸಿದ್ದಾರೆ.


ಅತ್ತಾ ತೀರ್ಥಹಳ್ಳಿ ಕ್ಷೇತ್ರವೂ ಆಗಿರದೇ ಇತ್ತಾ ಸಾಗರ-ಹೊಸನಗರ ಕ್ಷೇತ್ರವೂ ಆಗಿರದೇ ಅಡಕತ್ತರಿಯಲ್ಲಿ ಸಿಲುಕಿರುವ ಆದುವಳ್ಳಿ ಜನರ ಕಷ್ಟಕರವಾಗಿದು ತಕ್ಷಣ ಹೊಸನಗರ ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಆದುವಳ್ಳಿ ಗ್ರಾಮಸ್ಥರಿಗೆ ಸರ್ಕಾರ ಸೌಲಭ್ಯ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Leave A Reply

Your email address will not be published.

error: Content is protected !!