ಹುಗುಡಿಯಲ್ಲಿ ಗ್ರಾಮ ದೇವತೆಗಳ ನೋನಿ ಹಬ್ಬ

0 717

ರಿಪ್ಪನ್‌ಪೇಟೆ: ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಗುಡಿಯಲ್ಲಿ ನರಕ ಚತುರ್ದಶಿಯ ದಿನವಾದ ಭಾನುವಾರ ನೋನಿ ಹಬ್ಬವನ್ನು ವಿಶಿಷ್ಟವಾಗಿ ಶ್ರದ್ದಾಭಕ್ತಿಯೊಂದಿಗೆ ಗ್ರಾಮದೇವತೆಗಳ ಹರಕೆ ಪೂಜೆ ಸುಸಂಪನ್ನಗೊಂಡಿತು.


ಹಳ್ಳಿಯ ಪ್ರದೇಶದಲ್ಲಿ ದೀಪಾವಳಿಯ ಹಬ್ಬದಲ್ಲಿ ಹೆರಿಗೆಯಾದರೆ, ಆಕಸ್ಮಿಕ ಸಾವಾದರೆ ಅಥವಾ ಋತುಮತಿಯಾದರೆ ಆ ವರ್ಷ ನೋನಿ ಹಬ್ಬ ಕೆಟ್ಟಿತು ಎಂಬ ಪುರಾತನ ಕಾಲದಿಂದಲೂ ನಡೆಸಿಕೊಂಡ ಬಂದಂತಹ ಪದ್ದತಿಯಾಗಿದ್ದು ಈ ವರ್ಷ ದೀಪಾವಳಿಯಲ್ಲಿ ಅಂತಹ ಯಾವುದೇ ಘಟನೆಗಳು ಸಂಭವಿಸದೇ ನಿರ್ವಿಘ್ನವಾಗಿ ಹುಗುಡಿ ಗ್ರಾಮ ದೇವತೆಗಳ ನೋನಿ ಹಬ್ಬವು ಸುಸಂಪನ್ನಗೊಂಡಿದೆ ಎಂದು ಹಿರಿಯಜ್ಜ ಬೀಷ್ಠನಾಯ್ಕ್ ಮತ್ತು ಯಲ್ಲಪ್ಪಗೌಡ ಚಂದ್ರಕಾಂತಗೌಡ ವಿವರಿಸಿದರು.

ಲಿಂಗಾಯಿತ ಮತ್ತು ಈಡಿಗ ಒಕ್ಕಲಿಗ ಸಮುದಾಯದವರು ಸೇರದಂತೆ ಇತರ ಜಾತಿಯ ಕುಟುಂಬ ವರ್ಗ ಮನೆಗೆ ಒಬ್ಬರಂತೆ ಗ್ರಾಮ ದೇವರ ಬನಕ್ಕೆ ತೆರಳಿ ಸ್ವಚ್ಚಗೊಳಿಸಿ ಬರುವುದು ಇಲ್ಲಿನ ವಿಶೇಷ ಮರು ದಿನ ಅಂದರೆ ನರಕ ಚತುರ್ದಶಿಯಂದು ಗ್ರಾಮ ದೇವರಿಗೆ ಹಣ್ಣು-ಕಾಯಿ, ಹೂವೊಂದಿಗೆ ಕೆಲವರು ಕೋಳಿ, ಕುರಿಯ ಬಲಿಯನ್ನು ನೀಡಿ ದೇವತೆಯಲ್ಲಿ ಹರಕೆ ಸಮರ್ಪಿಸಿ ಮುಂದಿನ ಬೆಳೆಗೆ ರೋಗ ರುಜಿನೆ ಪ್ರಾಣಿ ಪಕ್ಷಿಗಳಿಂದ ಬೆಳೆ ರಕ್ಷಣೆ ಮಾಡುವಂತೆ ದೇವತೆಗಳಲ್ಲಿ ಪ್ರಾರ್ಥನೆ ಸಲ್ಲಿಸುವುದು ವಿಶೇಷವಾಗಿದೆ.

ಈ ನೋನಿ ಆಚರಣೆಯಲ್ಲಿ ಡಾ.ಶಶಿಕಾಂತ್ ಹುಗುಡಿ, ಹೆಚ್.ವಿ.ರಾಜು ಹುಗುಡಿ, ಚಂದ್ರಶೇಖರಗೌಡ, ಯೋಗೇಂದ್ರ, ವೀರಭದ್ರಪ್ಪ, ನಾಗಾರ್ಜುನಪ್ಪಗೌಡ, ಚಂದ್ರಕಾಂತಗೌಡ ಸೇರಿದಂತೆ ಗ್ರಾಮದ ಮಹಿಳೆಯರು ದೇವತೆಗಳ ಬನಕ್ಕೆ ಬಂದಿದ್ದು ಪೂಜಾ ಕಾರ್ಯವನ್ನು ಪುರುಷ ವರ್ಗವೇ ಮಾಡಬೇಕು ಮಹಿಳೆಯರು ದೇವತೆಗಳ ಬನದ ಬಳಿ ನಿಂತು ವೀಕ್ಷಣೆ ಮಾಡುವುದು ಇಲ್ಲಿನ ಪದ್ದತಿ.

Leave A Reply

Your email address will not be published.

error: Content is protected !!