ಹೃದಯಾಘಾತದಿಂದ ವ್ಯಕ್ತಿ ಸಾವು !

0 1,909

ರಿಪ್ಪನ್‌ಪೇಟೆ: ಹೃದಯಾಘಾತದಿಂದಾಗಿ (Heart attack) ಹುಂಚದ (Humcha) ಗುಳಕೊಪ್ಪ ಸಂದೀಪ (43) ಎಂಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.


ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಜೈನ ಸಂಪ್ರದಾಯದಂತೆ ಹುಂಚದ ರುದ್ರಭೂಮಿಯಲ್ಲಿ ಜರುಗಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕಮಲಾಕ್ಷ

ರಿಪ್ಪನ್‌ಪೇಟೆ: ಇಲ್ಲಿನ ಟ್ರ್ಯಾಕ್ಟರ್ ಶೋ ರೋಂನಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಕಮಲಾಕ್ಷ ಬನಶೆಟ್ಟಿಕೊಪ್ಪ (48) ಇವರು ಅನಾರೋಗ್ಯದಿಂದಾಗಿ ಶುಕ್ರವಾರ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.


ಮೃತರಿಗೆ ಪತ್ನಿ ಓರ್ವ ಪುತ್ರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ವೀರಶೈವ ಸಂಪ್ರದಾಯದಂತೆ ಹುಂಚ ಗ್ರಾಮದ ಬನಶೆಟ್ಟಿಕೊಪ್ಪದ ಅವರ ಜಮೀನಿನಲ್ಲಿ ಜರುಗಿತು.

Leave A Reply

Your email address will not be published.

error: Content is protected !!