ಹೆಬ್ಬಿಗೆ ನ್ಯಾಯಬೆಲೆ ಅಂಗಡಿಗೆ ವಾರ್ಷಿಕೋತ್ಸವ ಸಂಭ್ರಮ

0 0


ಹೊಸನಗರ : ತಾಲೂಕಿನ ನಿಟ್ಟೂರು ಗ್ರಾ‌.ಪಂ. ವ್ಯಾಪ್ತಿಯ ಹೆಬ್ಬಿಗೆ ನ್ಯಾಯಬೆಲೆ ಅಂಗಡಿಗೆ ಒಂದು ವರ್ಷ ತುಂಬಿದ್ದು, ಜವಾಬ್ದಾರಿಯಿಂದ ವ್ಯವಸ್ಥಿತವಾಗಿ ಪಡಿತರ ವಿತರಣಾ ವ್ಯವಸ್ಥೆ ನಡೆಸುತ್ತಿರುವ ಸ್ಪಂದನಾ ಸ್ತ್ರಿ ಶಕ್ಕಿ ಸಂಘ, ಗಂಟಿಗೇಮನೆಪುರ ಇದರ ಅಧ್ಯಕ್ಷರು ಮತ್ತು ಸದಸ್ಯರನ್ನು ಗುರುವಾರ ಗ್ರಾಮ ಪಂಚಾಯಿತಿ ವತಿಯಿಂದ ನ್ಯಾಯಬೆಲೆ ಅಂಗಡಿಯಲ್ಲಿ ಶಾಲು ಹೊದಿಸಿ,ಅಭಿನಂಧನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಹೆಬ್ಬಿಗೆ ಗ್ರಾಮವು ನಿಟ್ಟೂರು ಗ್ರಾ.ಪಂ. ಕೇಂದ್ರದಿAಹದ 15 ಕಿ.ಮೀ. ದೂರವಿದ್ದು, ಉಚಿತ ಪಡಿತರ ಪಡೆದುಕೊಳ್ಳಲು ದೂರದಿಂದ ನಡೆದುಕೊಂಡು ಬಂದು, 200, 300 ರೂ. ಆಟೋ ಬಾಡಿಗೆ ತೆತ್ತು, ಇಡೀ ದಿನ ಕಾದು ಪಡಿತರ ಒಯ್ಯಬೇಕಾಗಿತ್ತು, ಇದರಿಂದ ಹಣ ಮತ್ತು ಸಮಯ ಕೂಡ ವ್ಯರ್ಥವಾಗಿ ಪಡಿತರದಾರರಿಗೆ ಭಾರಿ ತೊಂದರೆ ಉಂಟಾಗಿತ್ತು. ಇಲ್ಲಿನ ಗ್ರಾ.ಪಂ. ಸದಸ್ಯ ಮತ್ತು ಇತರ ಸ್ಥಳೀಯ ಮುಖಂಡರ ನಿರಂತರ ಪ್ರಯತ್ನದಿಂದ ಹೆಬ್ಬಿಗೆ ಗ್ರಾಮಕ್ಕೆ ನೂತನ ನ್ಯಾಯಬೆಲೆ ಅಂಗಡಿ ಕಳೆದ ವರ್ಷ ಮಂಜೂರಾಗಿ ಗ್ರಾಮದ ಜನರ ಬವಣೆ ದೂರವಾಗಿತ್ತು. ಕೇವಲ 86 ರೇಷನ್ ಕಾರ್ಡ್‌ಗೆ ಒಂದು ಹೊಸ ನ್ಯಾಯಬೆಲೆ ಅಂಗಡಿ ಹೊಂದಿದ ರಾಜ್ಯದ ಏಕೈಕ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆಗಿನ ಶಾಸಕರಾಗಿದ್ದ ಹರತಾಳು ಹಾಲಪ್ಪನವರೇ ಬಂದು ನ್ಯಾಯಬೆಲೆ ಅಂಗಡಿ ಉದ್ಘಾಟನೆ ನಡೆಸಿದ್ದರು. ಗ್ರಾಮದ ಸ್ತ್ರೀ ಶಕ್ತಿ ಸಂಘಕ್ಕೆ ಪಡಿತರ ವಿತರಣೆ ಜವಾಬ್ದಾರಿ ನೀಡಲಾಗಿತ್ತು.


ಗ್ರಾಪಂ ಸದಸ್ಯ ಪುರುಷೋತ್ತಮ ಶಾನುಬೋಗ್ ಮತ್ತು ರಘುನಾಥ ಮರಿಗದ್ದೆ, ನಾಗಭೂಷಣ್ ಹೆಬ್ಬಿಗೆ ಹಾಗೂ ಪರಮೇಶ್ವರ ಗಂಟಿಗೇಮನೆ ಮತ್ತು ವೆಂಕಟ ಮೇಣಿ ಗಾಣಿಗಾಪುರ ಹಾಗೂ ಇತರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!