ಹೊಂಬುಜ ; ಜಗನ್ಮಾತೆ ಶ್ರೀ ಪದ್ಮಾವತಿ ದೇವಿಗೆ ಚಿನ್ನದ ಸೀರೆ ಸಮರ್ಪಣೆ

0 570

ರಿಪ್ಪನ್‌ಪೇಟೆ : ಅತಿಶಯ ಶ್ರೀಕ್ಷೇತ್ರ ಹೊಂಬುಜ (Hombuja) ಜಗನ್ಮಾತೆ ಶ್ರೀ ಪದ್ಮಾವತಿ ದೇವಿಯವರಿಗೆ ಭಕ್ತರು ಚಿನ್ನದ ಸೀರೆಯನ್ನು (Gold Saree’s) ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಶುಭ ಶುಕ್ರವಾರದಂದು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಸಾನಿಧ್ಯದಲ್ಲಿ ಭಕ್ತಿಪೂರ್ವಕ ಸಮರ್ಪಿಸಿದರು.

ಊರ ಪರವೂರ ಭಕ್ತವೃಂದದವರು ‘ಶ್ರೀ ಪದ್ಮಾವತಿ ಮಾತಾಕೀ ಜೈ’ ಹರ್ಷೋದ್ಗಾರಗೈದರು. ವಿಶಿಷ್ಠ ವಿನ್ಯಾಸದಲ್ಲಿ ಚಿನ್ನದ ಸೀರೆ ಯಕ್ಷಿ ಶ್ರೀ ಪದ್ಮಾವತಿ ದೇವಿಯವರಿಗೆ ಸಮರ್ಪಿಸಿದ ಬಳಿಕ ಭಕ್ತರು ಪೂಜ್ಯಶ್ರೀಗಳವರಿಂದ ಗೌರವ ಆಶೀರ್ವಾದ ಪಡೆದರು.

Leave A Reply

Your email address will not be published.

error: Content is protected !!