ಹೊಂಬುಜ ; ನೂತನ ಸಮುದಾಯ ಭವನಕ್ಕೆ ಭೂಮಿ ಪೂಜೆ

0 274

ರಿಪ್ಪನ್‌ಪೇಟೆ : ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಸಮುದಾಯ ಭವನದ ನೂತನ ಕಟ್ಟಡ ನಿರ್ಮಾಣಕ್ಕೆ ಗುರುವಾರದಂದು ಭೂಮಿ ಪೂಜೆ ನೆರವೇರಿಸಲಾಯಿತು.

ನೂತನ ಸಮುದಾಯ ಭವನ ನಿರ್ಮಾಣಕ್ಕೆ ಪೂಜ್ಯ ಮಹಾಸ್ವಾಮೀಜಿಗಳವರು 09:30ರ ಶುಭ ಮುಹೂರ್ತದಲ್ಲಿ ಭೂಮಿಪೂಜೆ ನೆರವೇರಿಸಿ ಭಕ್ತರ ಹಾಗೂ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿರುವ ಈ ಸುಸಜ್ಜಿತ ಸಮುದಾಯ ಭವನವು ಜನಕಲ್ಯಾಣ ಕಾರ್ಯಗಳಿಗೆ ಬೇಗ ಲಭ್ಯವಾಗಲಿ ಎಂದು ಆಶೀರ್ವದಿಸಿದರು.

ಪುರೋಹಿತ ವರ್ಗದವರು ಪೂಜಾ ಕಾರ್ಯಗಳನ್ನು ನಡೆಸಿದರು. ಈ ಶುಭ ಸಂದರ್ಭದಲ್ಲಿ ಹೊಂಬುಜ ಜೈನ ಮಠದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ ನೇ. ಮಗದುಮ್ಮ, ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್, ಜಿ. ಮಂಜಪ್ಪ, ಡಾ|| ಜೀವಂಧರ್ ಜೈನ್, ರತ್ನಕುಮಾರ್, ದೇವೇಂದ್ರ, ಕರ್ನಾಟಕ ರಾಜ್ಯ ಹ್ಯಾಬಿಟೆಟ್ ಕೇಂದ್ರದ ಇಂಜಿನಿಯರ್‌ಗಳು, ಶ್ರೀ ಕ್ಷೇತ್ರದ ಶ್ರಾವಕರು, ಭಕ್ತರು ಮುಂತಾದವರು ಆಗಮಿಸಿದ್ದರು.

Leave A Reply

Your email address will not be published.

error: Content is protected !!