ಹೊಸನಗರದಲ್ಲಿ ನೂತನವಾಗಿ ಪ್ರಾರಂಭಿಸಿದ ಅನಂತೇಶ್ವರ ಜ್ಯುವೆಲರಿ ವರ್ಕ್ಸ್‌ಗೆ ಭೇಟಿ ನೀಡಿ ಶುಭ ಹಾರೈಸಿದ ಬೇಳೂರು ಗೋಪಾಲಕೃಷ್ಣ

0 15


ಹೊಸನಗರ: ಇಲ್ಲಿನ ಚೌಡಮ್ಮ ರಸ್ತೆಯಲ್ಲಿ ಶುಕ್ರವಾರ ಸಂಜೆ ಅನಂತೇಶ್ವರ ಜ್ಯುವೆಲರಿ ವರ್ಕ್ಸ್ ಅಂಗಡಿಯನ್ನು ನೂತನವಾಗಿ ಪ್ರಾರಂಭಿಸಲಾಗಿದ್ದು ಹೊಸನಗರ-ಸಾಗರ ಕ್ಷೇತ್ರದ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಆಗಮಿಸಿ ಪ್ರಸಾದ ಸ್ವೀಕರಿಸಿ ಶುಭ ಹಾರೈಸಿದರು.


ಆನಂತೇಶ್ವರ ಜ್ಯುವೆಲರಿ ಮಾಲಕರಾದ ಸಂತೋಷ್ ಶೇಟ್ ದಂಪತಿಗಳು ಬೇಳೂರು ಗೋಪಾಲಕೃಷ್ಣರವರನ್ನು ಈ ಭೇಟಿ ನೀಡಿದ ಸಂದರ್ಭದಲ್ಲಿ ಅದ್ದೂರಿಯಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಬರಲಿ ಎಂದು ಹಾರೈಸಿದರು.


ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಕಾಂಗ್ರೆಸ್ ಅಧ್ಯಕ್ಷ ಗುರುರಾಜ್, ತರಕಾರಿ ಅಂಗಡಿ ಮಾಲೀಕರಾದ ಸುಧೀಂದ್ರ ಪಂಡಿತ್, ಶುಭಾಕರ, ಸಣ್ಣಕ್ಕಿ ಮಂಜು, ಜಯನಗರ ಗೋಪಿ, ಗಗ್ಗ ಬಸವರಾಜ್, ಸುಧೀರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!