ಹೊಸನಗರದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಶಿವಣ್ಣ ; ಬೇಳೂರು ಪರ ಮತಯಾಚನೆ
ಹೊಸನಗರ: ಇಂದು ಕಾಂಗ್ರೆಸ್ ಪಕ್ಷ ಏರ್ಪಡಿಸಿದ ಪ್ರಚಾರ ಸಭೆಯಲ್ಲಿ ಅಭೂತಪೂರ್ವ ಬೈಕ್ ರ‍್ಯಾಲಿ ರೋಡ್ ಶೋ ನಲ್ಲಿ ಭಾಗವಹಿಸಿದ ನಟ ಶಿವರಾಜ್‍ಕುಮಾರ್ ಕೆಇಬಿ ಸರ್ಕಲ್ ಬಳಿ ಡಾ. ಪುನೀತ್ ರಾಜ್‍ಕುಮಾರ್ ಕನ್ನಡ ಸಂಘದವರು ಪ್ರತಿಷ್ಠಾಪಿಸಿರುವ ಕನ್ನಡ ಧ್ವಜ ಹಾಗೂ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಪುನೀತ್ ರಾಜ್‍ಕುಮಾರ್ ಕನ್ನಡ ಸಂಘದ ಉಡುಪಿ ಎಸ್ ಸದಾನಂದ ಶಿವಣ್ಣನವರಿಗೆ ಮಾಲಾರ್ಪಣೆ ಮಾಡಿದರೆ ಡಾ. ಸೋನಲೆ ಶ್ರೀನಿವಾಸ್ ಶಾಲು ಹೊದಿಸಿದರು. ಸಂಘದ ಗೌರವಾಧ್ಯಕ್ಷ ಪ್ರಶಾಂತ್ ಮೈಸೂರು ಪೇಟ ನೀಡಿದರು.
ಬೇಳೂರು ಪರ ಮತಯಾಚನೆ
ಈ ಭಾಗದ ಜನರು ಬೇಳೂರು ಗೋಪಾಲಕೃಷ್ಣ ಹಾಗೂ ಕಿಮ್ಮನೆ ರತ್ನಾಕರ್ ಅವರಿಗೆ ಮತ ನೀಡುವ ಮೂಲಕ ಹಾಗೂ ಕೊಡಿಸುವ ಮೂಲಕ ಪುನಃ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವಲ್ಲಿ ಸಹಕಾರ ನೀಡಬೇಕೆಂದರು.

ಮಧು ಬಂಗಾರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ್ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ರಾಜ್ಯ ಹಾಗೂ ತಾಲೂಕು ಮುಖಂಡರುಗಳು ಹಾಗೂ ಅಪಾರ ಸಂಖ್ಯೆಯ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಸಮಾರಂಭದಲ್ಲಿ ಉಪಸ್ಥಿತರಿದ್ದರು

