ಹೊಸನಗರ ; ಅಕ್ರಮ ಮರಳುಗಾರಿಕೆ ತಡೆ ಹಿಡಿಯಲು ಅಧಿಕಾರಿಗಳಿಗೆ ಜನ ಸಂಗ್ರಾಮ ಪರಿಷತ್ ಸಂಚಾಲಕ ಗಿರೀಶ್ ಆಚಾರ್ ಒತ್ತಾಯ | Sand | Hosanagara | Shivamogga

0 0


ಹೊಸನಗರ: ತಾಲ್ಲೂಕಿನಲ್ಲಿ ಹಗಲು-ರಾತ್ರಿ ಎನ್ನದೇ ಅಕ್ರಮ ಮರಳು ಕಲ್ಲುಗಳು ಸಾಗಾಟ ನಡೆಯುತ್ತಿದೆ ಇಲ್ಲಿಯವರೆಗೆ ರಾಜಕೀಯ ನಾಯಕರ ಬೆಂಬಲದಿಂದ ಅಧಿಕಾರಿಗಳಿಗೆ ಕೆಲಸ ಮಾಡಲು ಸಾಧ್ಯವಾಗಿಲ್ಲ ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಮರಳು ಲಾರಿಗಳನ್ನು ವಶಕ್ಕೆ ಪಡೆಯಬೇಕೆಂದು ತಾಲ್ಲೂಕು ಜನ ಸಂಗ್ರಾಮ ಪರಿಷತ್ ಸಂಚಾಲಕ ಗಿರೀಶ್ ಆಚಾರ್‌ರವರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.


ಸುಮಾರು ಮೂರು ತಿಂಗಳುಗಳಿಂದ ಹೊಸನಗರ ತಾಲ್ಲೂಕು ಬೆಕ್ಕೋಡಿ, ನಗರ, ಹನಿಯಾ, ಹರತಾಳು, ಹಲುಸಾಲೆ ಮಳವಳ್ಳಿ, ತೋಟದಕೊಪ್ಪ, ಸುತ್ತಾ ಹಾಗೂ ಹಿಲ್ಕುಂಜಿ ಸೇತುವೆ ಬಡದಲ್ಲಿಯೇ ರ‍್ಯಾಂಪ್ ಮಾಡಿಕೊಂಡು ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ಇಟ್ಟುಕೊಂಡು ಅಕ್ರಮ ಮರಳು ಹೊಳೆಯಲ್ಲಿ ತೆಗೆಯುತ್ತಿದ್ದಾರೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6ಗಂಟೆಯವರೆಗೆ ಅಕ್ರಮ ಮರಳು ತುಂಬಿದ ಲಾರಿಗಳು ಓಡಾಟ ನಡೆಸುತ್ತಿದ್ದರೂ ಯಾವುದೇ ಅಧಿಕಾರಿಗಳು ಅಕ್ರಮ ಮರಳು ತುಂಬಿದ ಲಾರಿಗಳನ್ನು ವಶಕ್ಕೆ ಪಡೆದಿಲ್ಲ ಅಧಿಕಾರಿಗಳ ಕಣ್ಣು ಎದುರಿನಲ್ಲಿಯೇ ಅಕ್ರಮ ಮರಳು ಸಂಚಾರ ನಡೆಯುತ್ತಿದೆ. ಅಧಿಕಾರಿ ವರ್ಗ ಜಾಣ ಕುರುಡರಂತೆ ಎಲ್ಲ ಶಾಸಕರ, ಸಚಿವರ ಮೇಲೆ ಹಾಕಿ ಕೈ ತೊಳೆದುಕೊಳ್ಳುತ್ತಿದ್ದರು ಅಧಿಕಾರಿಗಳ ಗಮನಕ್ಕೆ ಬಾರದೇ ಇರುವ ಲಾರಿಗಳನ್ನು ವಶಕ್ಕೆ ಪಡೆದು ಕೇಸು ಹಾಕುತ್ತಿದ್ದರು ಎಂದು ಹೇಳಲಾಗಿದ್ದು ಆದರೆ ಈಗ ರಾಜಕೀಯ ನಾಯಕರ ಅಧಿಕಾರವಿಲ್ಲ ಏನೇ ಆದರೂ ಅಧಿಕಾರಿ ವರ್ಗದವರೇ ಸುಪ್ರೀಂ ಆದ್ದರಿಂದ ಇನ್ನೂ ಮುಂದಾದರೂ ಅಕ್ರಮವಾಗಿ ಮರಳು ತುಂಬಿದ ಲಾರಿಗಳನ್ನು ವಶಕ್ಕೆ ಪಡೆಯುತ್ತಾರೆಯೇ ಕಾದು ನೋಡಬೇಕಾಗಿದ್ದು ಇಲ್ಲವಾದರೆ ಮೇಲಾಧಿಕಾರಿಗಳ ಹಾಗೂ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುವುದರ ಜೊತೆಗೆ ನ್ಯಾಯಾಲಯ ಹಾಗೂ ಲೋಕಯುಕ್ತಕ್ಕೆ ಅಧಿಕಾರ ದುರುಪಯೋಗದ ಅಡಿಯಲ್ಲಿ ದೂರು ನೀಡುವುದಾಗಿ ತಿಳಿಸಿದರು.


ತಕ್ಷಣ ಸರ್ಕಲ್‌ಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿ:

ಇದು ಚುನಾವಣೆಯ ಸಂದರ್ಭ ಆದ್ದರಿಂದ ಕಾರಣಗಿರಿ, ಜಯನಗರ, ಹೊಸನಗರದ ಎಲ್ಲ ಸರ್ಕಲ್‌ಗಳಿಗೆ ಹಾಗೂ ಮಾವಿನಕೊಪ್ಪ ಸರ್ಕಲ್‌ಗಳಿಗೆ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿ ಯಾವುದೇ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದ್ದು ಮೇಲಾಧಿಕಾರಿಗಳು ಯಾವುದೇ ಅಕ್ರಮ ದಂಧೆ ನಡೆಯುವ ಸ್ಥಳಕ್ಕೆ ಭೇಟಿ ನೀಡುವಾಗ ಕೆಳ ವರ್ಗದ ನೌಕರರಿಗೆ ಜೀಪ್ ಡ್ರೈವರ್‌ಗಳಿಗೆ ವಿಷಯ ತಿಳಿಸದೇ ಹೋದರೆ ತಾವು ಹಾಕಿಕೊಂಡ ಗುರಿ ಮುಟ್ಟಲು ಸಾಧ್ಯ ಎಂದರು.

Leave A Reply

Your email address will not be published.

error: Content is protected !!