ಹೊಸನಗರ ; ಏ. 6 ರಂದು ವೀರಾಂಜನೇಯ ದೇವಸ್ಥಾನದ ಆವರಣದಲ್ಲಿ ಹನುಮ ಜಯಂತಿ ಉತ್ಸವ ಹಾಗೂ 15ನೇ ವರ್ಷದ ವರ್ಧಂತ್ಯುತ್ಸವ

0 0


ಹೊಸನಗರ: ಪಟ್ಟಣದ ನಗರ ರಸ್ತೆಯಲ್ಲಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಏಪ್ರಿಲ್ 6 ರಂದು ಹನುಮ ಜಯಂತಿ ಉತ್ಸವ ಹಾಗೂ 15ನೇ ವರ್ಷದ ವರ್ಧಂತ್ಯುತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.


ಏಪ್ರಿಲ್ 6 ಗುರುವಾರ ಬೆಳಿಗ್ಗೆ 7ಗಂಟೆಗೆ ಗುರುವಂದನೆ, ಫಲ ಸಮರ್ಪಣೆ, ವೀರಾಂಜನೇಯ ಸ್ವಾಮಿ ಪ್ರಾರ್ಥನೆ ನಾಗದೇವರ ಪ್ರಾರ್ಥನೆ, ಗಣಪತಿ ಪೂಜೆ, 7;30ಕ್ಕೆ ಹನುಮಜಯಂತಿ ಉತ್ಸವ ತೊಟ್ಟಿಲು ಸೇವೆ ನಂತರ ಗಣಹೋಮ, ಸಾಮೂಹಿಕ ರುದ್ರಾಭಿಷೇಕ ಮತ್ತು ಸಾಮೂಹಿಕ ಪವಮಾನ ಅಭಿಷೇಕ ಹಾಗೂ ವೀರಾಂಜನೇಯ ಸ್ವಾಮಿ ದೇವರಿಗೆ ಕಲಾವೃದ್ಧಿ ಹೋಮ, ಬೆಳಿಗ್ಗೆ 11;30ಕ್ಕೆ ನಾಗದೇವರ ಸನ್ನಿಧಿಯಲ್ಲಿ ಕಲಶ ಸ್ತಾಪನೆ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಮದ್ಯಾಹ್ನ 12ಗಂಟೆಗೆ ನಾಗದರ್ಶನ, ಮಧ್ಯಾಹ್ನ 1ಗಂಟೆಗೆ ಮಹಾಮಂಗಳಾರತಿ, ತೀರ್ಥ ಮತ್ತು ಪ್ರಸಾದ ವಿನಿಯೋಗ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ 5ಗಂಟೆಗೆ ರಾಜಬೀದಿಗಳಲ್ಲಿ ಸುಮಧುರ ಮಂಗಳವಾದ್ಯಗಳೊಂದಿಗೆ ಶ್ರೀ ವೀರಾಂಜನೇಯ ಸ್ವಾಮಿ ದೇವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಎಲ್ಲ ದೇವತ ಕಾರ್ಯಕ್ರಮಗಳಿಗೆ ಸ್ವಾಮಿಯ ಭಕ್ತಾರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ದೇವಸ್ಥಾನ ಕಮಿಟಿಯವರು ಈ ಮೂಲಕ ಕೇಳಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!