ಹೊಸನಗರ ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿಗಳ & ಉಪನ್ಯಾಸಕರ ಜಟಾಪಟಿಗೆ ತಾರ್ಕಿಕ ಅಂತ್ಯ

0 56


ಹೊಸನಗರ: ಸುಮಾರು 15ದಿನಗಳಿಂದ ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕ
ಅಂಜನ್‌ಕುಮಾರ್ ಹಾಗೂ ವಿದ್ಯಾರ್ಥಿಗಳ ಮಧ್ಯೆ ಜಟಾಪಟಿ ನಡೆಯುತ್ತಿದ್ದು ಇಂದು ತಾತ್ಕಾಲಿಕ ಅಂತ್ಯಗೊಂಡಿದೆ.

ಹೊಸನಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರು ತಿಂಗಳಿಂದ ಪ್ರಾಂಶುಪಾಲರಾಗಿ ಸೇವೆ
ಸಲ್ಲಿಸುತ್ತಿದ್ದ ಅಂಜನ್‌ಕುಮಾರ್‌ರವರ ವಿರುದ್ಧ ಇದೇ ಕಾಲೇಜಿನ ವಿದ್ಯಾರ್ಥಿಗಳು ಈ ಹಿಂದೆ ಇವರು ಇರುವವರೆಗೆ ನಾವುಗಳ ಕಾಲೇಜಿಗೆ ಬರುವುದಿಲ್ಲ. ಇವರನ್ನು ತಕ್ಷಣ ವರ್ಗಹಿಸಬೇಕೆಂದು ಪಟ್ಟು ಹಿಡಿದು ಧರಣಿ ನಡೆಸಿದ್ದರು
ಅಂದು ರಾಜ್ಯ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ವಿಷ್ಣುಮೂರ್ತಿ ಅಡಿಗ ಹಾಗೂ ಸಿಬ್ಬಂದಿಗಳು
ಕಾಲೇಜಿಗೆ ಆಗಮಿಸಿ ಇನ್ನೂ ಮುಂದೆ ಪ್ರಾಂಶುಪಾಲರ ಹುದ್ದೆಯಿಂದ ತೆಗೆದು ಇನ್ನೂ ಮುಂದೆ ಇವರು
ಉಪನ್ಯಾಸಕರಾಗಿ ಈ ಕಾಲೇಜಿಗೆ ಬರುವುದಿಲ್ಲ ಇಲ್ಲಿಂದ ವರ್ಗಾಯಿಸುವುದಾಗಿ ಹೇಳಿ ರಜೆಯ ಮೇಲೆ ಅಂಜನ್‌ಕುಮಾರ್ ತೆರಳಬೇಕೆಂದು ಮೌಖಿಕ ಆದೇಶ ನೀಡಿದ್ದು ಅಂದು ವಿದ್ಯಾರ್ಥಿಗಳನ್ನು ಸಮಾಧಾನ ಮಾಡಿ
ಹೋಗಿದ್ದರು ಅಲ್ಲಿಗೆ ಒಂದು ರೀತಿಯಲ್ಲಿ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜ್‌ನ ವಿದ್ಯಾರ್ಥಿಗಳು ತಣ್ಣಗಾಗಿದ್ದರು.

ಪುನಃ ಕಾಲೇಜಿಗೆ ಆಗಮಿಸಿದ ಅಂಜನ್‌ಕುಮಾರ್:ಜಂಟಿ ನಿರ್ದೆಶಕರವರ ಮೌಖಿಕ ಆದೇಶದ ಮೇರೆಗೆ ಸುಮಾರು 10ದಿನಗಳಿಂದ ಕಾಲೇಜಿಗೆ ಆಗಮಿಸದ ಉಪನ್ಯಾಸಕ ಅಂಜನ್‌ಕುಮಾರ್‌ರವರು ಇಂದು ಕಾಲೇಜಿಗೆ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಗಲಾಟೆ ಪ್ರಾರಂಬಿಸಿದರು.

ಸಂಧಾನ ಯಶಸ್ವಿ :ರಾಜ್ಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವಿಷ್ಣುಮೂರ್ತಿಯವರು ಹಿಂದಿನ ಪ್ರಾಂಶುಪಾಲರಾಗಿದ್ದ ಅಂಜನ್ ಕುಮಾರ್‌ರವರನ್ನು ತೆಗೆದು ಅದೇ ಕಾಲೇಜಿನ ಉಪನ್ಯಾಸಕರಾಗಿದ್ದ ಶ್ರೀಪತಿ ಹಳಗುಂದರವರನ್ನು ಪ್ರಾಂಶುಪಾಲರಾಗಿ ನೇಮಿಸಿ ಹೋಗಿದ್ದು ಅವರು ಗಲಾಟೆ ಮಾಡುತ್ತಿರುವ ವಿದ್ಯಾರ್ಥಿಗಳನ್ನು ತಮ್ಮ ಕೊಠಡಿಗೆ ಕರೆದು ಹಾಗೂ ಅಂಜನ್‌ಕುಮಾರ್ ಉಪನ್ಯಾಸಕ ವರ್ಗದವರೊಂದಿಗೆ ಚರ್ಚಿಸಿ ಅಂಜನ್‌ಕುಮಾರ್‌ರವರು ಇನ್ನೂ ಒಂದು ವಾರ ರಜೆಯ ಮೇಲೆ ತೆರಳಲು ಸೂಚಿಸಲಾಗಿದ್ದು ಅವರು ಪುನಃ ಈ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುವುದಿಲ್ಲ.ವರ್ಗಾವಣೆಯ ಆದೇಶ ಸದ್ಯದಲ್ಲಿಯೇ ಬರಲಿದೆ ಎಂದು ಸೂಚಿಸಿದ ನಂತರ ಗಲಾಟೆ, ಗದ್ದಲಗಳು ಮುಕ್ತಾಯಗೊಂಡಿದ್ದು ಸಂಧಾನ ಸಭೆ ಯಶಸ್ವಿಗೊಳಿಸಿದರು.


ಜಂಟಿ ನಿರ್ದೇಶಕ ಪುನಃ ಆಗಮನ: ರಾಜ್ಯ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ವಿಷ್ಣುಮೂರ್ತಿ ಅಡಿಗ ಹಾಗೂ ಸಿಬ್ಬಂದಿಗಳು ಇಂದು ಕಾಲೇಜಿಗೆ ಭೇಟಿ ನೀಡಿ ಹಿಂದಿನ ವಾರ ಬಂದಾಗ ಆದ ಗಲಾಟೆ, ಗದ್ದಲಗಳನ್ನು ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ವರದಿಯನ್ನು ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಮೇಲಾಧಿಕಾರಿಗಳ ವರದಿ ಇನ್ನೂ ಒಂದೆರಡು ದಿನಗಳಲ್ಲಿ ಬರಲಿದೆ ಅಲಿಯವರೆಗೆ ಎಲ್ಲ ವಿದ್ಯಾರ್ಥಿಗಳು ಶಾಂತ ರೀತಿಯಲ್ಲಿ ಬೋಧನೆಯನ್ನು ಕಲಿಯಿರಿ ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದರು.

ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಲು ಪ್ರಯತ್ನ: ಶ್ರೀಪತಿ ಹಳಗುಂದ:-ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು ಸಾವಿರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂನಸುಮಾರು 50ಕ್ಕಿಂತಲ್ಲೂ ಹೆಚ್ಚು ಉಪನ್ಯಾಸಕ ವೃಂದವಿದ್ದು ಉತ್ತಮ ಶಿಕ್ಷಣದ ಜೊತೆಗೆ ಆಟೋಟಗಳಲ್ಲಿ ಶಿಸ್ತು ಸಂಯಮದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿಯು ಹೆಮ್ಮೆಯ ಕಾಲೇಜ್ ಆಗಿ ಪರಿವರ್ತಿಸುವುದಾಗಿ ತಿಳಿಸಿದ್ದು ನಮಗೆ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬೆಂಬಲವಾಗಿ ಯಶಸಿನಲ್ಲಿ ಸಹಕರಿಸಬೇಕೆಂದು ನೂತನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಶ್ರೀಪತಿ ಹಳಗುಂದರವರು ಈ ಸಂದರ್ಭದಲ್ಲಿ ಕೇಳಿಕೊಂಡರು.

Leave A Reply

Your email address will not be published.

error: Content is protected !!