ಹೊಸನಗರ ; ಗ್ರಾಪಂ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಿಗೆ ಭರ್ಜರಿ ಜಯ

0 0

ಹೊಸನಗರ : ವಿವಿಧ ಕಾರಣಗಳಿಂದ ತೆರವಾಗಿದ್ದ ಹೆದ್ದಾರಿಪುರ ಗ್ರಾಪಂ ತಳಲೆ ಮತ್ತು ನಿಟ್ಟೂರು ಗ್ರಾಪಂನ ಹೆಬ್ಬಿಗೆ ವಾರ್ಡ್‌ನ ಮೂರು ಸ್ಥಾನಗಳಿಗೆ ಶನಿವಾರ ಮತದಾನ ನಡೆದಿತ್ತು‌. ಇಂದು ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಬೆಂಬಲಿತ ಮೂವರು ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.

ತಳಲೆ ವಾರ್ಡ್‌ನ ಶ್ರೇಯಸ್ ತಮ್ಮ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಸುರೇಶ್ ಬೇಕರಿ ಅವರಿಗಿಂತ 87 ಮತಗಳನ್ನು ಹೆಚ್ಚು ಪಡೆದು ಗೆಲುವು ಪಡೆದುಕೊಂಡಿದ್ದಾರೆ.

ಚುನಾವಣೆಯಲ್ಲಿ ಒಟ್ಟು 594 ಮತ ಚಲಾವಣೆ ಆಗಿತ್ತು. ಈ ಪೈಕಿ ಶ್ರೇಯಸ್ ಅವರು 279 ಮತಗಳನ್ಮು ಪಡೆದುಕೊಂಡರೆ ಸುರೇಶ್ ಬೇಕರಿ ಅವರು 192 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಮಂಜಣ್ಣ 120 ಮತಗಳನ್ನು ಪಡೆದಿದ್ದಾರೆ‌. 3 ಮತಗಳು ಅಸಿಂಧುಗೊಂಡಿತ್ತು.

ಇನ್ನೂ ನಿಟ್ಟೂರು ಗ್ರಾಮ ಪಂಚಾಯಿತಿಯ ಹೆಬ್ಬಿಗೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪುರುಷೋತ್ತಮ ಶಾನುಬೋಗ್ ಹಾಗೂ ಕೋಟೆಶಿರೂರು ಸ್ವರೂಪ ಉಡುಪ ಭರ್ಜರಿ ಗೆಲುವು ಸಾಧಿಸಿದ್ದಾರೆ‌.
ಪುರುಷೋತ್ತಮ್ ರವರು ಚಲಾವಣೆ ಆದ 293 ಮತಗಳಲ್ಲಿ 236 (81%) ಮತ ಪಡೆದರೆ ಎದುರಾಳಿ ವಾಸುದೇವ ರವರು 52 ಮತ ಪಡೆದಿದ್ದಾರೆ.

ಕೋಟೆಶಿರೂರು ಸ್ವರೂಪ ಉಡುಪ ರವರು ಚಲಾವಣೆ ಆದ 204 ಮತಗಳಲ್ಲಿ 121 ಮತ ಪಡೆದರೆ, ಎದುರಾಳಿ ಲಕ್ಷ್ಮೀ 40 ಮತ್ತು ವಿಜಯಲಕ್ಷ್ಮಿ 39 ಮತ ಪಡೆದಿದ್ದಾರೆ.

ಮಂಗಳವಾರ ಹೊಸನಗರ ತಾಲೂಕು ಪಂಚಾಯತ್ ನಲ್ಲಿ ಮತ ಎಣಿಕೆ ಮಾಡಲಾಯಿತು. ವಿಜಯಶಾಲಿ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Leave A Reply

Your email address will not be published.

error: Content is protected !!