ಹೊಸನಗರ ; ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾಗಿ ಬಾಳೇಕೊಪ್ಪ ಕೆ. ನಾಗಪ್ಪ ಅವಿರೋಧ ಆಯ್ಕೆ | Hosanagara | Revenue Department

0 0


ಹೊಸನಗರ: ತಾಲ್ಲೂಕು ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷರಾಗಿ ಬಾಳೇಕೊಪ್ಪ ಕೆ.ನಾಗಪ್ಪನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಹೊಸನಗರದ ಹಳೇ ತಹಸೀಲ್ದಾರ್‌ರವರ ಮನೆಯಲ್ಲಿ ತಾಲ್ಲೂಕಿನ ಎಲ್ಲ ಗ್ರಾಮ ಸಹಾಯಕರು ಸಭೆ ನಡೆಸಿ ಇವರನ್ನು ಆಯ್ಕೆ ಮಾಡಿದರು.


ಗ್ರಾಮ ಸಹಾಯಕರ ಸಂಘದ ಕಾರ್ಯದರ್ಶಿಯಾಗಿ ಸುರೇಶ ಹಾಲುಗುಡ್ಡೆ, ಉಪಾಧ್ಯಕ್ಷರಾಗಿ ಶಂಕರ, ಖಜಾಂಚಿಯಾಗಿ, ರಾಘವೇಂದ್ರ ಜಿ, ಸಹ ಖಜಾಂಚಿ ರಾಘವೇಂದ್ರ ಕೆ.ಜಿ, ಗೌರವಾಧ್ಯಕ್ಷರಾಗಿ ಅಶೋಕ ಮಾರುತಿಪುರ ರವರನ್ನು ಆಯ್ಕೆ ಮಾಡಿದ್ದಾರೆ.


ಗ್ರಾಮ ಸಹಾಯಕರಿಗೆ ಕಷ್ಟ ಸುಖಗಳಲ್ಲಿ ಭಾಗವಹಿಸುತ್ತನೆ:
ಗ್ರಾಮ ಸಹಾಯಕರ ಕೆಲಸ ನಿರ್ವಹಿಸುವುದು ಕಷ್ಟಕರವಾಗಿದೆ. ಒಟ್ಟು ಜೀವನ ನಡೆಸಲು ಈ ಕೆಲಸ ಮಾಡಬೇಕಾಗಿದ್ದು ಗ್ರಾಮ ಸಹಾಯಕರಿಗೆ ಸರ್ಕಾರದಿಂದ ಸೌಲಭ್ಯ ಕೊಡಿಸುವುದರ ಜೊತೆಗೆ ಗ್ರಾಮ ಸಹಾಯಕರಿಗೆ ಏನೇ ಕಷ್ಟಕರವಾಗಿದ್ದರೂ ಅವರ ಬೆನ್ನೆಲುಬಾಗಿ ಕಷ್ಟ ಸುಖಗಳಲ್ಲಿ ಅವರ ಜೊತೆಗಿರುತ್ತೇನೆ ಎಂದು ಎಲ್ಲ ಗ್ರಾಮ ಸಹಾಯಕರು ಸಂಘದ ಅಡಿಯಲ್ಲಿ ಏನೇ ತೊಂದರೆಯಾದರೂ ಸಂಘ ನಿಮ್ಮ ಬೆಂಬಲಕ್ಕೆ ಇರುತ್ತದೆ ಆದರೆ ನಿಮ್ಮ ತಪ್ಪುಗಳಿಗೆ ಸಂಘ ಯಾವುದೇ ರೀತಿಯಲ್ಲಿಯೂ ಬೆಂಬಲಿಸುವುದಿಲ್ಲ ಎಂದು ನೂತನವಾಗಿ ಅಧ್ಯಕ್ಷ ಬಾಳೆಕೊಪ್ಪ ಕೆ ನಾಗಪ್ಪನವರು ಹೇಳಿದರು.

Leave A Reply

Your email address will not be published.

error: Content is protected !!